ಕೃಷ್ಣರಾಜಪೇಟೆ : ತಾಲ್ಲೂಕಿನ ಕಿಕ್ಕೇರಿ ಸಮೀಪದ ಬೂವನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 18 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ್ ಡಿ. ಎಲ್ ರವರು ನಿವೃತ್ತಿ ಹೊಂದ ಹಿನ್ನಲೆ ಇಂದು ಗ್ರಾಮಸ್ಥರಿಂದ ಬೀಳ್ಕೊಡುಗೆ ಸಮಾರಂಭ ಆಯೋಜನೆ ಮಾಡಲಾಗಿತ್ತು

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿವ ಮೂಲಕ ಉದ್ಘಾಟಿಸಿ ಮಾತನಾಡಿದ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಉಪಾದ್ಯಕ್ಷರಾದ ರ್ಧರ್ಮಪ್ಪ ಮತ್ತು ಶಿಕ್ಷಣ ಸಂಯೋಜಕರಾದ ನವೀನ್ ಮಾತನಾಡಿ ಅತ್ಯಂತ ಶಿಸ್ತಿನ ಶಿಕ್ಷಕರಾದ ಮಹೇಶ್ ಎಂದರೆ ಮಕ್ಕಳಿಗೆ ಅಚ್ಚುಮೆಚ್ಚು, ಅಲ್ಲದೆ ಸುತ್ತಮುತ್ತಲಿನ ಹಳ್ಳಿಗಳ ಅಪಾರ ಜನತೆಯ ವಿಶ್ವಾಸ ಗಳಿಸಿ ಅತ್ಯಂತ ಪ್ರೀತಪಾತ್ರ ಶಿಕ್ಷಕರಾಗಿದ್ದರು. ಶಾಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟು ಪ್ರತಿವರ್ಷ ಶಾಲೆಯಲ್ಲಿ ಉತ್ತಮ ಫಲಿತಾಂಶ ಬರುವಂತೆ ನೋಡಿಕೊಳ್ಳುತ್ತಿದ್ದರು ಇಂತಹ ಶಿಕ್ಷರು ಇಂದು ನಿವೃತ್ತಿ ಹೊಂದಿದ್ದು ಇವರಿಗೆ ಗ್ರಾಮಸ್ಥರಿಂದ ಅದ್ದೂರಿ ಬಿಳ್ಕೊಡುಗೆ ನೀಡಿ ಗೌರವಿಸಲಾಗಿದೆ ಎಂದರು..
ಗೌರವ ಸ್ಪೀಕರಿಸಿ ಮಾತನಾಡಿದ ಶಿಕ್ಷಕ ಮಹೇಶ್ ಮಾತನಾಡಿ ಕಳೆದ 18 ವರ್ಷಗಳಿಂದ ನಾನು ನಿಮ್ಮ ಗ್ರಾಮದಲ್ಲಿ ಕರ್ತವ್ಯ ನಿರ್ವಯುಸುತ್ತಿದೆ ಆದರೆ ಇಂದು ನಿವೃತ್ತಗೊಂಡು ನನ್ನ ಶಿಕ್ಷಕ ವೃತ್ತಿಗೆ ವಿಧಾಯ ಹೇಳಬೆಡಕಾದ ಸಂದರ್ಭದಲ್ಲಿ ಬಂದಿದೆ ಇಷ್ಟು ದಿನ ನನ್ನ ಮೇಲೆ ಇಟ್ಟಿದ್ದ ಈ ಪ್ರೀತಿ ವಿಶ್ವಾಸಕ್ಕೆ ಯಾವಾಗಲಿ ಚಿರರುಣಿ ಯಾಗಿರುತ್ತೇನೆ ಎಂದು ಭಾವುಕರಾದರು

ಈ ಸಂದರ್ಭದಲ್ಲಿ ಎಸ್ ಡಿ ಎಂ ಅಧ್ಯಕ್ಷರಾದ ರೇಣುಕಮ್ಮ, ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಉಪಾದ್ಯಕ್ಷರಾದ ಧರ್ಮಪ್ಪ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕುಮಾರ್, ಶಿಕ್ಷಣ ಸಂಯೋಜಕರಾದ ನವೀನ್, ಶಿಕ್ಷಕರಾದ ದೊರಸ್ವಾಮಿ, ಕೋದಂಡ, ಮಂಜು, ಪುಟ್ಟೇಗೌಡ, ದೀನೇಶ್, ವನಜಾಕ್ಷಿ, ಕೋಡಿಗೌಡ್ರು, ಶಿವಪ್ಪ, ರಾಜಕುಮಾರ್, ಗೋವಿಂದಪ್ಪ, ಕೃಷ್ಣ, ವಸಂತಕುಮಾರ್, ನಾಗಮಣಿ, ಶಿಲ್ಪ, ನಂಜುಂಡಯ್ಯ, ನಾರಾಯಣಶೆಟ್ರು, ನವೀನ್ ಕುಮಾರ್, ಲಿಂಗರಾಜು, ಉದ್ಯಮಿ ವೆಂಕಟೇಶ್, ಗ್ರಾಮಸ್ಥರಾದ ಶಿವಲಿಂಗು, ಪುಟ್ಟರಾಜು, ಸೇರಿದಂತೆ ಗ್ರಾಮದ ಮುಖಂಡರುಗಳು, ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳು ಇದ್ದರು..
ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

More Stories
ಕೆ.ಆರ್. ಪೇಟೆ ಪಿ.ಎಲ್.ಡಿ ಬ್ಯಾಂಕ್ ನೂತನ ಉಪಾಧ್ಯಕ್ಷರಾಗಿ ಲಕ್ಷ್ಮೀಪುರ ಚಂದ್ರೇಗೌಡ ಅವಿರೋಧ ಆಯ್ಕೆ
ಸಾಧಿಸುವ ಛಲ, ಏಕಾಗ್ರತೆಯಿಂದ ಗುರಿ ತಲುಪಿ; ವಿದ್ಯಾರ್ಥಿಗಳಿಗೆ ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಕಿವಿಮಾತು
ಕೆ.ಆರ್.ಪೇಟೆ: ಪರೋಪಕಾರ, ಸೇವಾ ಮನೋಭಾವನೆ ವಿದ್ಯಾರ್ಥಿಗಳ ಜೀವನದ ಉಸಿರಾಗಲಿ; ಶಿಕ್ಷಣ ತಜ್ಞೆ ಜೆ. ಉಮಾದೇವಿ