April 28, 2026

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶ್ರೀವಲಿ ಪ್ರೌಢ ಶಾಲೆ ಚಿತ್ರಾಪುರ ಶೇಕಡಾ 100 ಫಲಿತಾಂಶ ಸಾಧನೆ


ಭಟ್ಕಳ : ಶೈಕ್ಷಣಿಕ ವರ್ಷ 2025–26ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆ ಅತ್ಯುತ್ತಮ ಸಾಧನೆ ಮಾಡಿದೆ. ಪರೀಕ್ಷೆಗೆ ಹಾಜರಾದ ಒಟ್ಟು 105 ವಿದ್ಯಾರ್ಥಿಗಳಲ್ಲಿ ಎಲ್ಲಾ 105 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡಾ 100 ಫಲಿತಾಂಶ ದಾಖಲಿಸಲಾಗಿದೆ.
ಈ ವರ್ಷ ವಿದ್ಯಾರ್ಥಿಗಳಲ್ಲಿ ನಾಗರಾಜ್ ಮಂಜುನಾಥ ನಾಯ್ಕ್ ಅವರು 606 ಅಂಕಗಳನ್ನು ಪಡೆದು 96.96% ಸಾಧನೆ ಮಾಡಿ ಶಾಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.ಗಣೇಶ್ ಮಹಾಬಲೇಶ್ವರ ಗೋಂಡ ಅವರು 597 ಅಂಕಗಳನ್ನು ಪಡೆದು 95.52% ಸಾಧನೆ ಮಾಡಿದ್ದಾರೆ. ಧನ್ಯಾ ನಾರಾಯಣ ನಾಯ್ಕ್ ಅವರು 592 ಅಂಕಗಳನ್ನು ಪಡೆದು 95.52% ಸಾಧನೆ ಮಾಡಿದ್ದಾರೆ.


ಒಟ್ಟು ಫಲಿತಾಂಶ ವಿವರಗಳು ಈ ಕೆಳಗಿನಂತಿವೆ:
ಡಿಸ್ಟಿಂಕ್ಷನ್: 26 ವಿದ್ಯಾರ್ಥಿಗಳು
ಪ್ರಥಮ ದರ್ಜೆ: 75 ವಿದ್ಯಾರ್ಥಿಗಳು
ದ್ವಿತೀಯ ದರ್ಜೆ: 4 ವಿದ್ಯಾರ್ಥಿಗಳು
ಒಟ್ಟು ಉತ್ತೀರ್ಣ ಪ್ರಮಾಣ: 100%
ಗುಣಮಟ್ಟದ ಫಲಿತಾಂಶ: 90% ಕ್ಕಿಂತ ಹೆಚ್ಚು
ಹಾಗೂ knnadaವಿಷಯಗಳಲ್ಲಿ 4 ವಿದ್ಯಾರ್ಥಿಗಳು 125ರಲ್ಲಿ 125 ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಈ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಆಡಳಿತ ಮಂಡಲಿ ಹಾಗೂ ವಿದ್ಯಾರ್ಥಿಗಳನ್ನು ಪೋಷಕರು ಅಭಿನಂದಿಸಿದ್ದಾರೆ

About The Author

error: Content is protected !!