ಕುಮಟಾ : ಇಲ್ಲಿನ ಪೊಲೀಸ್ ಉಪ ನಿರೀಕ್ಷಕಿ ಸಾವಿತ್ರಿ ಹಾಗೂ ಅವರ ಪತಿ ಆನಂದ ನಾಯಕರವರನ್ನು ತಾಲ್ಲೂಕಿನ ಬರ್ಗಿಯ ಅವರ “ಶ್ರೀರಾಮ ನಿಲಯ”ದಂಗಳದಲ್ಲಿ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದಿಂದ “ಕನ್ನಡ ಭಾರತೀ ಪ್ರಪಂಚ” ದ ಸಂಚಾಲಕರಾದ ನಾಗನೆಲೆಯ ನಾರಾಯಣ ನಾಗು ನಾಯಕರು “ಆತ್ಮ ಭಾವಾನಂದ ಸಾವಿತ್ರಿ” ಉಪಾದಿಯೊಂದಿಗೆ ಆತ್ಮೀಯವಾಗಿ ಅಭಿಮಾನಪೂರ್ವಕವಾಗಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವ್ಕರ್ ಬರ್ಗಿಯವರು, ಸಾವಿತ್ರಕ್ಕ ಪೊಲೀಸ್ ಇಲಾಖೆಯಲ್ಲಿ ತನ್ನ ಸಜ್ಜನಿಕೆಯ ನಡವಳಿಕೆಯ ಮೂಲಕ ಸಾರ್ವಜನಿಕವಾಗಿ ಮಾನಿತರಾದ ಬಗ್ಗೆ ಪ್ರಶಂಸಿಸಿದರಲ್ಲದೆ, ಅವರ ಪತಿ ಆನಂದಣ್ಣ ಶರೀರದಂತೆ ಶಾರೀರದಲ್ಲಿಯೂ ದೊಡ್ಡತನವನ್ನು ಹೊಂದಿ, ಕುಟುಂಬದಲ್ಲಿ, ಸಮಾಜದಲ್ಲಿ, ಬಂಧು – ಬಾಂಧವರ ನಡುವೆ ಮುತ್ಸದ್ದಿಕೆಯ ವ್ಯಕ್ತಿತ್ವವಾಗಿ ಹತ್ತಾರು ಜನರಿಗೆ ಬೇಕಾಗಿರುವ ಕುರಿತು ಶ್ಲಾಘಿಸಿದರು.

ಸನ್ಮಾನವನ್ನು ಸ್ವೀಕರಿಸಿದ ಸಾವಿತ್ರಿ ನಾಯಕರು ತಮ್ಮ ಮನೆಯಂಗಳದಲ್ಲಿ ತನ್ನನ್ನು ತನ್ನ ಪತಿಯೊಂದಿಗೆ ಗೌರವಿಸಿದ ಬಗ್ಗೆ ದಾಸು ಮನೆ ಕುಟುಂಬದ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಿದರಲ್ಲದೇ, ತಮಗಿದು ಜೀವನದಲ್ಲಿ ಮರೆಯಲಾಗದ ಆತ್ಮಾನಂದದ ಕ್ಷಣವೆಂದರು. ಈ ವೇಳೆಯಲ್ಲಿ ಮೇಘನಾ ನಾಯಕ, ಸುಮನಾ ನಾಯಕ ಹಾಗೂ ನಾಗವೇಣಿ ನಾಯಕ ಮೊದಲಾದವರಿದ್ದರು.
About The Author


More Stories
ಹಿರೇಗುತ್ತಿಯಲ್ಲಿ 14 ವಯೋಮಾನದ ಬಾಲಕ-ಬಾಲಕಿಯರ ಇಲಾಖಾ ಕ್ರೀಡಾಕೂಟ
ಎನ್. ರಾಮು ಹಿರೇಗುತ್ತಿಗೆ ಒಲಿದ ‘ಇಂಡಿಯಾ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್’
ಸಂಪನ್ನಗೊಂಡ ಮಿರ್ಜಾನ್ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ