ಚಿಕ್ಕೋಡಿ ; ನಗರದಲ್ಲಿ ಇಂದು 2025-26ನೇ ಸಾಲಿನ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (MPLADS) ಹಾಗೂ ಜಿಲ್ಲಾ ಖನಿಜ ನಿಧಿ (DMF) ಅನುದಾನದಡಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವಿವಿಧ ವಿಧಾನಸಭಾ ಕ್ಷೇತ್ರಗಳ 136 ವಿಶೇಷ ಚೇತನ ಫಲಾನುಭವಿಗಳಿಗೆ ಅಗತ್ಯ ಸಾಧನ-ಸಲಕರಣೆಗಳನ್ನು ವಿತರಿಸಲಾಯಿತು.

ಅಥಣಿ ಹಾಗೂ ಕಾಗವಾಡ ವಿಧಾನಸಭಾ ಕ್ಷೇತ್ರಗಳಿಗೆ ಸಂಸದೆ Priyanka Jarkiholi ಅವರ MPLADS ಹಾಗೂ 2025-26ನೇ ಸಾಲಿನ ಜಿಲ್ಲಾ ಖನಿಜ ನಿಧಿ ಯೋಜನೆಯಡಿ ಅಥಣಿ ಕ್ಷೇತ್ರದ 16 ಹಾಗೂ ಕಾಗವಾಡ ಕ್ಷೇತ್ರದ 15 ಫಲಾನುಭವಿಗಳಿಗೆ ಒಟ್ಟು 31 ಸಾಧನಗಳನ್ನು ವಿತರಿಸಲಾಯಿತು.
ವಿತರಿಸಲಾದ ಸಾಧನಗಳಲ್ಲಿ 10 ವಾಟರ್ ಬೆಡ್‌ಗಳು, 8 ವೀಲ್‌ಚೇರ್‌ಗಳು, 5 ಶ್ರವಣ ಸಾಧನಗಳು, 3 ತ್ರಿಚಕ್ರ ಸೈಕಲ್‌ಗಳು ಹಾಗೂ 5 ತ್ರಿಚಕ್ರ ಸ್ಕೂಟರ್‌ಗಳು ಸೇರಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು, ವಿಶೇಷ ಚೇತನ ನಾಗರಿಕರ ದೈನಂದಿನ ಜೀವನವನ್ನು ಸುಗಮಗೊಳಿಸುವುದರ ಜೊತೆಗೆ ಅವರ ಸ್ವಾವಲಂಬನೆ ಹಾಗೂ ಜೀವನಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಈ ಸಾಧನಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ಸಮಾಜದ ಪ್ರತಿಯೊಂದು ವರ್ಗದ ಸಬಲೀಕರಣ ಮತ್ತು ಸಮಗ್ರ ಅಭಿವೃದ್ಧಿಯೇ ನಮ್ಮ ಬದ್ಧತೆಯಾಗಿದ್ದು, ಜನಸೇವೆಯ ಮೂಲಕ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಲು ನಿರಂತರವಾಗಿ ಕಾರ್ಯನಿರ್ವಹಿಸಲಾಗುವುದು ಎಂದು ಅವರು ಹೇಳಿದರು.

More Stories
ಮದಭಾವಿ ಸರ್ಕಾರಿ ಶಾಲೆಯಲ್ಲಿ ನೂತನ ವೇದಿಕೆ ನಿರ್ಮಾಣಕ್ಕೆ ಚಾಲನೆ: ಶಿಕ್ಷಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ
ಹುಬ್ಬಳ್ಳಿಯಲ್ಲಿ ‘ಕರ್ನಾಟಕ ಸಾಧನಾ ಮುಕುಟ’ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ: 100ಕ್ಕೂ ಹೆಚ್ಚು ಸಾಧಕರಿಗೆ ಗೌರವ
ಅಥಣಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ: ಶಾಸಕ ಲಕ್ಷ್ಮಣ ಸವದಿ ಉದ್ಘಾಟನೆ