July 25, 2026

ತ್ಯಾಗಲಿಯಲ್ಲಿ ಯಶಸ್ವಿಯಾದ ಆಧಾರ್ ತಿದ್ದುಪಡಿ ಮೇಳ: 100ಕ್ಕೂ ಅಧಿಕ ಜನರಿಗೆ ಅನುಕೂಲ

ತ್ಯಾಗಲಿ: ತ್ಯಾಗಲಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ಮತ್ತು ಭಾರತೀಯ ಅಂಚೆ ಇಲಾಖೆ ಶಿರಸಿ ವಿಭಾಗ ಇವರ ಜಂಟಿ ಸಹಯೋಗದಲ್ಲಿ ದಿನಾಂಕ 17/07/2026 ಮತ್ತು 18/07/2026 ರಂದು ಹಮ್ಮಿಕೊಳ್ಳಲಾಗಿದ್ದ ‘ಆಧಾರ್ ತಿದ್ದುಪಡಿ ಮೇಳ’ವು ಅತ್ಯಂತ ಯಶಸ್ವಿಯಾಗಿ ಜರುಗಿತು.
ಮುಂಜಾನೆ 10:30 ಕ್ಕೆ ಪ್ರಾರಂಭವಾದ ಈ ವಿಶೇಷ ಶಿಬಿರದಲ್ಲಿ ಸುತ್ತಮುತ್ತಲಿನ ಗ್ರಾಮೀಣ ಭಾಗದ ಸುಮಾರು 100ಕ್ಕೂ ಅಧಿಕ ಸಾರ್ವಜನಿಕರು ಭಾಗವಹಿಸಿ, ತಮ್ಮ ಆಧಾರ್ ಕಾರ್ಡ್‌ಗಳ ಲೋಪದೋಷಗಳನ್ನು ತಿದ್ದುಪಡಿ ಮಾಡಿಕೊಳ್ಳುವ ಮೂಲಕ ಕಾರ್ಯಕ್ರಮದ ಸದ್ಬಳಕೆ ಪಡಿಸಿಕೊಂಡರು.

ಗಣ್ಯರ ಉಪಸ್ಥಿತಿ ಮತ್ತು ಉದ್ಘಾಟನೆ:

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ಯಾಗಲಿ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ವಿ. ಎಮ್. ಹೆಗಡೆ ತಿಂಗು ಅವರು ವಹಿಸಿದ್ದರು. ಶಿರಸಿ ವಿಭಾಗದ ಅಂಚೆ ಅಧೀಕ್ಷಕರಾದ ಶ್ರೀ ಧನಂಜಯ ಆಚಾರ್ ಅವರು ಕಾರ್ಯಕ್ರಮವನ್ನು ಜ್ಞಾತಿ ದೀಪ ಬೆಳಗಿಸಿ ಅಧಿಕೃತವಾಗಿ ಉದ್ಘಾಟಿಸಿದರು.        ಶಿರಸಿ ದಕ್ಷಿಣ ವಿಭಾಗದ ಅಂಚೆ ಉಪ ಅಧೀಕ್ಷಕರಾದ ಶ್ರೀ ಸುನಿಲ್ ಕುಮಾರ್ ವಿ, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್‌ಗಳಾದ ಎಮ್. ಎಮ್. ಹೆಗಡೆ ಹಾಗೂ ಮಹೇಶ ಹೆಜ್ಜೆರಿ ಅವರು ಉಪಸ್ಥಿತರಿದ್ದು ಭಾಗವಹಿಸಿದ್ದರು.

ಸಂಘದ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದ ಈ ಸಮಾರಂಭದಲ್ಲಿ ಕುಮಾರಿ ಪಾವನಿ ಹೆಗಡೆ ಮತ್ತೀಹಳ್ಳಿ ಅವರು ಪ್ರಾರ್ಥನೆ ಸಲ್ಲಿಸಿದರು. ಶ್ರೀ ನಟರಾಜ್ ಹೆಗಡೆ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ, ಎಲ್ಲರನ್ನೂ ಸ್ವಾಗತಿಸಿದರು. ಕೊನೆಯಲ್ಲಿ ಶ್ರೀ ರಾಜಾರಾಮ ಹೆಗಡೆ ಅವರು ವಂದನಾರ್ಪಣೆ ಸಲ್ಲಿಸಿದರು.
ಮುಖ್ಯ ಕಾರ್ಯನಿರ್ವಾಹಕರಾದ ಸುಧಾಕರ್ ಹೆಗಡೆ, ಕಾನಸೂರು ಅಂಚೆ ಇಲಾಖೆಯ ಸಬ್ ಪೋಸ್ಟ್ ಮಾಸ್ಟರ್ ಜ್ಯೋತಿ ಬಾಲಿಗಾ ಹಾಗೂ ಅಂಚೆ ಇಲಾಖೆಯ ಸಿಬ್ಬಂದಿಗಳು ಜಂಟಿಯಾಗಿ ಇಡೀ ಕಾರ್ಯಕ್ರಮದ ಯಶಸ್ವಿ ಸಂಯೋಜನೆ ಮಾಡಿದ್ದರು.

About The Author

error: Content is protected !!