

ಸಿದ್ಧಾಪುರ: ದೇಶದ ಸ್ವಾತಂತ್ರ್ಯೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನೋತ್ಸವದ ಶುಭ ಸಂದರ್ಭದಲ್ಲಿ, ತಾಲೂಕಿನ ನಾಣಿಕಟ್ಟಾದಲ್ಲಿ ಬೃಹತ್ ಯಕ್ಷಗಾನ ಕಾರ್ಯಕ್ರಮ ‘ಯಕ್ಷ ಶ್ರಾವಣ’ ಗಾನ ವೈಭವವನ್ನು ಆಯೋಜಿಸಲಾಗಿದೆ.
ಬರುವ ಆಗಸ್ಟ್ 15 (ಶನಿವಾರ) ರಂದು ಸಂಜೆ 4:44 ರಿಂದ ನಾಣಿಕಟ್ಟಾದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಭಾಭವನದ ‘ಪದ್ಮಶ್ರೀ ದಿವಂಗತ ಚಿಟ್ಟಾಣಿ ವೇದಿಕೆ’ಯಲ್ಲಿ ಈ ಕಲಾ ಸಂಭ್ರಮ ನೆರವೇರಲಿದೆ.

ವೇದಮೂರ್ತಿ ಶ್ರೀಯುತ ವಿನಾಯಕ ಸು. ಭಟ್ಟ ಮತ್ತೀಹಳ್ಳಿ ಅವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಶಿರಸಿಯ ಶ್ರೀ ಹಿಲ್ಲೂರು ಯಕ್ಷಮಿತ್ರ ಬಳಗ ಹಾಗೂ ನಾಣಿಕಟ್ಟಾದ ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗದ ಸಹಯೋಗದೊಂದಿಗೆ ಯಕ್ಷರಂಗದ ಪ್ರಸಿದ್ಧ ಅಗ್ರಗಣ್ಯ ಕಲಾವಿದರು ಒಂದೇ ವೇದಿಕೆಯಲ್ಲಿ ಭಾಗವಹಿಸಿ ಗಾನ ವೈಭವ ನಡೆಸಿಕೊಡಲಿದ್ದಾರೆ.

“ಸ್ವಾತಂತ್ರ್ಯ ದಿನಾಚರಣೆಯ ಜೊತೆಗೆ ನಮ್ಮ ನಾಡಿನ ಕಲೆ, ಸಂಸ್ಕೃತಿಯನ್ನು ಎತ್ತಿಹಿಡಿಯುವ ಉದ್ದೇಶದಿಂದ ಈ ಯಕ್ಷಗಾನ ಗಾನ ವೈಭವವನ್ನು ಆಯೋಜಿಸಲಾಗಿದೆ. ಉತ್ತರ ಕನ್ನಡ ಹಾಗೂ ಸುತ್ತಮುತ್ತಲಿನ ಸಮಸ್ತ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮಕ್ಕೆ ಕಲಾ ಕಾಣಿಕೆ ನೀಡಿ ಪ್ರೋತ್ಸಾಹಿಸಬೇಕಾಗಿ ವಿನಂತಿ,” ಎಂದು ಆಯೋಜಕರಾದ ನಟರಾಜ ಎಂ. ಹೆಗಡೆ ಹಾಗೂ ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗದ ಸದಸ್ಯರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಸಂಪರ್ಕ ಹಾಗೂ ಹೆಚ್ಚಿನ ಮಾಹಿತಿಗಾಗಿ: 6360595517, 9482212046.

About The Author




More Stories
ಸಮಾಜಮುಖಿ ಚಿಂತಕ, ಪುಸ್ತಕ ಪ್ರೇಮಿ ಕಮಲಾಕರ ಭಂಡಾರಿ ಇನ್ನಿಲ್ಲ: ದೇಹದಾನಕ್ಕೆ ತೀರ್ಮಾನ
ತ್ಯಾಗಲಿಯಲ್ಲಿ ಯಶಸ್ವಿಯಾದ ಆಧಾರ್ ತಿದ್ದುಪಡಿ ಮೇಳ: 100ಕ್ಕೂ ಅಧಿಕ ಜನರಿಗೆ ಅನುಕೂಲ
ತ್ಯಾಗಲಿ ಶಾಲೆಗೆ ಶುದ್ಧ ನೀರಿನ ಘಟಕ ದೇಣಿಗೆ; ಸಂಸ್ಕಾರಯುತವಾದ ಶಿಕ್ಷಣ ಮುಖ್ಯ ಎಂದ ಅನಂತಮೂರ್ತಿ ಹೆಗಡೆ