

ಭಟ್ಕಳ / ಮುರುಡೇಶ್ವರ:
ಇಲ್ಲಿನ ಮುರುಡೇಶ್ವರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಬೀನಾ ವೈದ್ಯ ಇಂಟರ್‌ನೇಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳಿಂದ ವಿಶೇಷವಾಗಿ ‘ಗುರು ಪೂರ್ಣಿಮಾ’ ಕಾರ್ಯಕ್ರಮವು ಶಾಲೆಯ ರೋಷನಿ ಆಡಿಟೋರಿಯಂನಲ್ಲಿ ವೈಭವದಿಂದ ನೆರವೇರಿತು.
ಆಷಾಢ ಮಾಸದ ಪವಿತ್ರ ಹುಣ್ಣಿಮೆಯ ದಿನದಂದು ಆಚರಿಸಲಾಗುವ ಈ ಗುರು ಪೂರ್ಣಿಮೆಯು ಗುರುಗಳಿಗೆ ಗೌರವ ಸಲ್ಲಿಸುವ ಹಾಗೂ ಅವರ ದಿವ್ಯ ಆಶೀರ್ವಾದ ಪಡೆಯುವ ಪವಿತ್ರ ದಿನವಾಗಿದೆ.

ಈ ಶುಭ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಶ್ರದ್ಧಾ-ಭಕ್ತಿಯಿಂದ ಆರತಿ ಬೆಳಗಿ, ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು. ನಂತರ ತಮ್ಮೆಲ್ಲಾ ಗುರುಗಳ ಅಡಿಗಳಿಗೆ ನಮಸ್ಕರಿಸಿ, ಶೈಕ್ಷಣಿಕ ಹಾಗೂ ಜೀವನದ ಯಶಸ್ಸಿಗಾಗಿ ಆಶೀರ್ವಾದ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

About The Author




More Stories
ಭಟ್ಕಳದಲ್ಲಿ ಮನೆಯ ಶೆಡ್ನಿಂದ ಹೋಂಡಾ ಸ್ಕೂಟಿ ಕಳವು
ದೇಶಸೇವೆಯೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ: ಮುರ್ಡೇಶ್ವರ ಶಾಖೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ
ರೌಡಿ ಶೀಟರ್ ಜಗದೀಶ ಮೊಗೇರ ಉತ್ತರ ಕನ್ನಡ ಜಿಲ್ಲೆಯಿಂದ 6 ತಿಂಗಳು ಗಡಿಪಾರು!