

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪ ಸಮೀಪದ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಶ್ರೀ ವಿಶ್ವ ವೀರಾಂಜನೇಯ ಮಹಾಸಂಸ್ಥಾನಂ, ಹೇಮಪುರ ಮಹಾಪೀಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರ ನೇತೃತ್ವದ ‘ಪಶ್ಚಿಮ ಘಟ್ಟ ಸಂರಕ್ಷಣಾ ಚಾತುರ್ಮಾಸ್ಯ’ದ ಅಂಗವಾಗಿ ವಿಶೇಷ ಆಲೋಚನಾ ಸಭೆಯನ್ನು ಆಯೋಜಿಸಲಾಗಿದೆ.

ದಿನಾಂಕ 09-08-2026, ಭಾನುವಾರದಂದು ಬೆಳಿಗ್ಗೆ 10:00 ಗಂಟೆಗೆ “ನದಿ ಮತ್ತು ನೀರು – ನಮ್ಮ ಮುಂದಿನ ಪೀಳಿಗೆಯ ಭವಿಷ್ಯ” ಎಂಬ ವಿಷಯದ ಕುರಿತು ಕಾರ್ಯಕ್ರಮ ನಡೆಯಲಿದೆ.

ಸಂಪನ್ಮೂಲ ವ್ಯಕ್ತಿಗಳು: ಕಾರ್ಯಕ್ರಮದಲ್ಲಿ ಪ್ರಮುಖ ವಿಷಯ ಮಂಡನೆ ಮತ್ತು ಉಪನ್ಯಾಸ ನೀಡಲು ಈ ಕೆಳಗಿನ ಗಣ್ಯರು ಭಾಗವಹಿಸಲಿದ್ದಾರೆ:

ಶ್ರೀ ಶಿವಾನಂದ ಕಳವೆ: ಪರಿಸರ ಚಿಂತಕರು ಹಾಗೂ ಜಲ ಸಂರಕ್ಷಣಾಕಾರರು, ಉತ್ತರ ಕನ್ನಡ.


ಡಾ. ಗಿರೀಶ್ ಜನ್ನೆ: ಕಾಳಮಂಜಿ, ಪ್ರಾಧ್ಯಾಪಕರು.
ಚರ್ಚೆಯ ಪ್ರಮುಖ ವಿಷಯಗಳು: ಪಶ್ಚಿಮ ಘಟ್ಟದ ನದಿಗಳು, ಜಲಮೂಲಗಳು, ಅರಣ್ಯ ಹಾಗೂ ಕರಾವಳಿ ಕಣಿವೆಯಲ್ಲಿ ಪ್ರಸ್ತಾಪಿತವಾಗಿರುವ ‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ’ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಪರಿಸರ ಪರಿಣಾಮಗಳ ಕುರಿತು ಗಂಭೀರ ಚರ್ಚೆ ನಡೆಯಲಿದೆ. ನದಿಯ ಮಾತು, ಅರಣ್ಯ ಹಾಗೂ ವನ್ಯಜೀವಿಗಳ ಅಹವಾಲು ಆಲಿಸುವುದು ಮತ್ತು ನೀರಿನ ಮೌಲ್ಯ ತಿಳಿಯುವುದು ಈ ಚಿಂತನೆಯ ಮೂಲ ಉದ್ದೇಶವಾಗಿದೆ.
- ಬೆಳಿಗ್ಗೆ 10:00: ಚಿಂತನ-ಮಂಥನ ಉದ್ಘಾಟನೆ
- 10:30 – 11:30: ವಿಚಾರ ಮಂಡನೆ
- 11:30 – 11:45: ಚಹಾ ವಿರಾಮ
- 11:45 – 01:00: ವಿಚಾರ ಮಂಡನೆ ಮುಂದುವರೆಯುವುದು
- 01:00 – 02:00: ಊಟದ ವಿರಾಮ
- 02:00 – 04:00: ಪ್ರಶ್ನೋತ್ತರಗಳು
- ಸಂಜೆ 04:00: ಸಮಾರೋಪ
ಇದು ಯಾವುದೇ ರಾಜಕೀಯ ಕಾರ್ಯಕ್ರಮವಲ್ಲ. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಮುಂಬರುವ ಪಂಚಾಯಿತಿ ಚುನಾವಣೆಯ ಆಕಾಂಕ್ಷಿಗಳು ಹಾಗೂ ಗ್ರಾಮದ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ಹೊಂದಿರುವ ಸಾರ್ವಜನಿಕರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕಾಗಿ ಶ್ರೀ ಕ್ಷೇತ್ರ ಬಂಗಾರಮಕ್ಕಿ ಆಡಳಿತ ಮಂಡಳಿ ವಿನಂತಿಸಿದೆ.
(ಸಂಪರ್ಕ ಸಂಖ್ಯೆ: 9380643455)
About The Author




More Stories
ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ: ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಪ್ರಥಮ, ರಾಜ್ಯ ಮಟ್ಟಕ್ಕೆ ಆಯ್ಕೆ!
ಡಿ. ದೇವರಾಜ ಅರಸು 111ನೇ ಜನ್ಮದಿನಾಚರಣೆ: ಸಾಧಕರ ಸ್ವಗೃಹದಲ್ಲೇ ಸನ್ಮಾನಿಸಿ ಗೌರವಿಸಿದ ಅರಸು ವಿಚಾರ ವೇದಿಕೆ.
ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ: ಹೊನ್ನಾವರದಲ್ಲಿ ಮಾಜಿ ಸಿಎಂ ಜನ್ಮದಿನಾಚರಣೆ.