

ಮಂಕಿ / ಭಟ್ಕಳ: ಬಡವರು, ವಿದ್ಯಾರ್ಥಿಗಳು ಹಾಗೂ ಶೋಷಿತ ಸಮುದಾಯಗಳ ಪರವಾಗಿ ಸದಾ ಧ್ವನಿಯೆತ್ತುತ್ತಿದ್ದ ಪ್ರಭಾವಿ ನಾಯಕ ಮಂಕಾಳ ಎಸ್. ವೈದ್ಯ ಅವರಿಗೆ ಸಚಿವ ಸ್ಥಾನ ತಪ್ಪಿಸಿರುವುದು ಅತ್ಯಂತ ನೋವಿನ ಸಂಗತಿ. ಇದು ಕೇವಲ ಒಬ್ಬ ನಾಯಕನಿಗೆ ಹುದ್ದೆ ತಪ್ಪಿದ್ದಲ್ಲ, ಬದಲಿಗೆ ಬಡವರ ಮತ್ತು ನೊಂದವರ ಧ್ವನಿಯನ್ನೇ ಕಟ್ಟಿಹಾಕಿದಂತಾಗಿದೆ ಎಂದು ಮಂಕಿ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ನಾಯ್ಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪಕ್ಷದ ಹೈಕಮಾಂಡ್ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಹಿರಿಯ ನಾಯಕರ ನಿರ್ಧಾರದಿಂದ ಕರಾವಳಿ ಭಾಗದ ಜನರಿಗೆ ಭಾರಿ ನಿರಾಶೆಯಾಗಿದೆ ಎಂದಿದ್ದಾರೆ.


‘ದಾನಶೂರ ಕರ್ಣನ ಕವಚ-ಕುಂಡಲ ಕಿತ್ತುಕೊಂಡಂತೆ’ “ಮಂಕಾಳ ವೈದ್ಯರು ಜನರ ಸಮಸ್ಯೆ ಎದುರಾದಾಗ ಸರ್ಕಾರದ ಅನುದಾನಕ್ಕಾಗಿ ಕಾಯದೆ, ತಮ್ಮ ಸ್ವಂತ ಶಕ್ತಿಯಿಂದ ಮೊದಲು ನೆರವು ನೀಡುತ್ತಿದ್ದರು. ನಂತರ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ತಲುಪಿಸುತ್ತಿದ್ದ ಅಪರೂಪದ ನಾಯಕ. ದಾನಶೂರ ಕರ್ಣನ ಬಳಿ ಕವಚ-ಕುಂಡಲ ಕೇಳಿ ಪಡೆದಂತೆ, ಜನರಿಗಾಗಿ ಸದಾ ಮಿಡಿಯುತ್ತಿದ್ದ ಅವರ ಕೈಯಲ್ಲಿದ್ದ ಅಧಿಕಾರದ ಅವಕಾಶವನ್ನು ಕಿತ್ತುಕೊಳ್ಳಲಾಗಿದೆ. ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸುತ್ತಿದ್ದ ಬಲಿಷ್ಠ ಕೈಗಳನ್ನು ಕಟ್ಟಿಹಾಕುವ ಕೆಲಸವಾಗಿದೆ,” ಎಂದು ನಿಖಿಲ್ ನಾಯ್ಕ್ ಮಾರ್ಮಿಕವಾಗಿ ಉಲ್ಲೇಖಿಸಿದ್ದಾರೆ.

‘ಹೈಕಮಾಂಡ್ ತಕ್ಷಣ ನ್ಯಾಯ ಒದಗಿಸಲಿ’ ಮಂಕಾಳ ವೈದ್ಯರು ಎಲ್ಲಾ ಸಮಾಜದವರನ್ನೂ ತಮ್ಮ ಮನೆಯವರಂತೆ ಕಾಣುವ ಜನಪರ ನಾಯಕರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜನರ ಭಾವನೆ ಮತ್ತು ಆಶಯಗಳನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ತಕ್ಷಣವೇ ಗಂಭೀರವಾಗಿ ಪರಿಗಣಿಸಬೇಕು. ಶಾಸಕ ಮಂಕಾಳ ಎಸ್. ವೈದ್ಯ ಅವರಿಗೆ ಸೂಕ್ತ ಸ್ಥಾನಮಾನ ಹಾಗೂ ಗೌರವ ನೀಡುವ ಮೂಲಕ ಜಿಲ್ಲೆಯ ಜನರ ವಿಶ್ವಾಸಕ್ಕೆ ನ್ಯಾಯ ಒದಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.


About The Author




More Stories
ತೆರೆದ ಚರಂಡಿ ಹೊಂಡ: ಅಪಾಯದ ನಡುವೆ ಭಟ್ಕಳದ ವಾಹನ ಸವಾರರ ಸಂಚಾರ.
ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಮಂಕಾಳ್ ಎಸ್. ವೈದ್ಯ ಆಯ್ಕೆ: ಮಾಜಿ ಸಚಿವರಿಗೆ ಭಟ್ಕಳದಲ್ಲಿ ಅದ್ಧೂರಿ ಸ್ವಾಗತ.
ಆಗಸ್ಟ್ 18ರಂದು ಭಟ್ಕಳದಲ್ಲಿ ಬೃಹತ್ ರಕ್ತದಾನ ಶಿಬಿರ: ಡಾ. ಸುರೇಶ ನಾಯಕ್ ಸ್ಮರಣಾರ್ಥ ಆಯೋಜನೆ