August 22, 2026

ಹೊನ್ನಾವರದ ಎನ್. ಎಂ. ಗುರುಪ್ರಸಾದ್ ಅವರಿಗೆ ಕುವೆಂಪು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪ್ರದಾನ

ಹೊನ್ನಾವರ: ತಾಲೂಕಿನ ಕೆರೆಕೋಣದ ನಡಭಾಗ ಮೂಲದ ಎನ್. ಎಂ. ಗುರುಪ್ರಸಾದ್ ಅವರು ಕುವೆಂಪು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದಿಂದ ಗೌರವಾನ್ವಿತ ಪಿಎಚ್.ಡಿ. (PhD) ಪದವಿಗೆ ಭಾಜನರಾಗಿದ್ದಾರೆ.

ಆಗಸ್ಟ್ 7ರಂದು ನಡೆದ ಓಪನ್ ವೈವಾ (ಆಂತರಿಕ/ಬಾಹ್ಯ ಮೌಲ್ಯಮಾಪನ) ಪರೀಕ್ಷೆಯಲ್ಲಿ ಇವರ ಮಹಾಪ್ರಬಂಧವನ್ನು ಪುರಸ್ಕರಿಸಿದ ಕುವೆಂಪು ವಿಶ್ವವಿದ್ಯಾಲಯವು ಅಧಿಕೃತವಾಗಿ ಪಿಎಚ್.ಡಿ. ಪದವಿಯನ್ನು ಘೋಷಿಸಿದೆ.

ಸಂಶೋಧನೆಯ ವಿಷಯ: ಎನ್. ಎಂ. ಗುರುಪ್ರಸಾದ್ ಅವರು “ನೀರಿನ ಗುಣಮಟ್ಟತೆ ಹಾಗೂ ಶರಾವತಿ ಮತ್ತು ಅಘನಾಶಿನಿ ಅಳಿವೆಗಳ ಕಪ್ಪೆಚಿಪ್ಪುಗಳ ವೈವಿಧ್ಯತೆಯ ಮೇಲೆ ನೀರಿನ ಪ್ರಭಾವ” ಎಂಬ ವಿಷಯದ ಕುರಿತು ಆಳವಾದ ಸಂಶೋಧನಾ ಮಹಾಪ್ರಬಂಧವನ್ನು ಸಲ್ಲಿಕೆ ಮಾಡಿದ್ದರು.

ಮಾರ್ಗದರ್ಶನ: ಕುವೆಂಪು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಎಸ್. ಎಚ್. ಬಸವರಾಜಪ್ಪ ಅವರ ಮಾರ್ಗದರ್ಶನದಲ್ಲಿ ಗುರುಪ್ರಸಾದ್ ಅವರು ತಮ್ಮ ಈ ಸುದೀರ್ಘ ಸಂಶೋಧನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಕರಾವಳಿಯ ಜೀವವೈವಿಧ್ಯ ಹಾಗೂ ಪರಿಸರ ಕಾಳಜಿಯ ಈ ಪ್ರಮುಖ ಸಂಶೋಧನೆಗಾಗಿ ಹೊನ್ನಾವರ ತಾಲೂಕಿನಾದ್ಯಂತ ಮತ್ತು ಕುವೆಂಪು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದಿಂದ ಎನ್. ಎಂ. ಗುರುಪ್ರಸಾದ್ ಅವರಿಗೆ ಅಭಿನಂದನೆಗಳ ಸುರಿಮಳೆಯೇ ಹರಿದುಬರುತ್ತಿದೆ.

About The Author

error: Content is protected !!