November 22, 2026

ನಿಸರ್ಗಮನೆ ವೇದ ವೆಲ್‌ನೆಸ್ ಸೆಂಟರ್‌ಗೆ ಪ್ರತಿಷ್ಠಿತ NABH ರಾಷ್ಟ್ರೀಯ ಮಾನ್ಯತೆ

ಉತ್ತರ ಕನ್ನಡ ಜಿಲ್ಲೆಯ ಏಕೈಕ ಮಾನ್ಯತೆ ಪಡೆದ ಆಯುಷ್ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಭಾಜನ

ಶಿರಸಿ: ಆಯುರ್ವೇದ, ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಚಿಕಿತ್ಸೆಗಳನ್ನು ಒಂದೇ ಸೂರಿನಡಿ ಒದಗಿಸುತ್ತಿರುವ ಶಿರಸಿಯ ನಿಸರ್ಗಮನೆ ವೇದ ವೆಲ್‌ನೆಸ್ ಸೆಂಟರ್‌ಗೆ ನವದೆಹಲಿಯ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಸಂಸ್ಥೆಗಳ ರಾಷ್ಟ್ರೀಯ ಮಾನ್ಯತಾ ಮಂಡಳಿಯ (ಎನ್.ಎ.ಬಿ.ಎಚ್.) ಪ್ರತಿಷ್ಠಿತ ಪ್ರಮಾಣಪತ್ರ ಲಭಿಸಿದೆ. ಈ ಮೂಲಕ ಎನ್‌ಎಬಿಎಚ್‌ ಆಯುಷ್ ಆಸ್ಪತ್ರೆ ಪ್ರಮಾಣೀಕರಣ ಪಡೆದ ಉತ್ತರ ಕನ್ನಡ ಜಿಲ್ಲೆಯ ಏಕೈಕ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಈ ಸಂಸ್ಥೆ ಭಾಜನವಾಗಿದೆ.

ಪ್ರಕೃತಿಯ ಮಡಿಲಲ್ಲಿ ನಿರ್ಮಾಣಗೊಂಡಿರುವ ಸಂಸ್ಥೆಗೆ ದೊರೆತಿರುವ ಈ ಮಾನ್ಯತೆಯು ಗುಣಮಟ್ಟದ ಆರೋಗ್ಯ ಸೇವೆ, ರೋಗಿಗಳ ಸುರಕ್ಷತೆ ಹಾಗೂ ವ್ಯವಸ್ಥಿತ ಚಿಕಿತ್ಸಾ ಪದ್ಧತಿಗೆ ಸಿಕ್ಕ ಗೌರವವಾಗಿದೆ.

ಆರೋಗ್ಯ ವಿಮೆ ಹಾಗೂ ಚಿಕಿತ್ಸಾ ಮರುಪಾವತಿ ಸೌಲಭ್ಯ: ಈ ಮಾನ್ಯತೆಯು ರೋಗಿಗಳ ಸುರಕ್ಷತೆ, ನೈರ್ಮಲ್ಯ ಹಾಗೂ ಸೇವೆಯ ಗುಣಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯ ವಿಮಾ ವ್ಯವಸ್ಥೆಯಲ್ಲೂ ಮಹತ್ವದ ಪಾತ್ರ ವಹಿಸಲಿದೆ. ಈಗಾಗಲೇ ರಾಜ್ಯ ಸರ್ಕಾರಿ ನೌಕರರು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಹಾಗೂ ಬೆಸ್ಕಾಂ (BESCOM) ಸಿಬ್ಬಂದಿಗೆ ಚಿಕಿತ್ಸಾ ವೆಚ್ಚ ಮರುಪಾವತಿ (Reimbursement) ಸೌಲಭ್ಯ ಹೊಂದಿರುವ ಈ ಆಸ್ಪತ್ರೆಯಲ್ಲಿ, ಇನ್ಮುಂದೆ ವಿಮಾ ಒಪ್ಪಂದಗಳ ನಿಯಮಾವಳಿಗೆ ಅನುಗುಣವಾಗಿ ಸಾರ್ವಜನಿಕರಿಗೂ ಆರೋಗ್ಯ ವಿಮೆಯಡಿ ಚಿಕಿತ್ಸೆ ಪಡೆಯಲು ಹೆಚ್ಹು ಅನುಕೂಲವಾಗಲಿದೆ.

ಈ ಸಾಧನೆಗೆ ಸಹಕರಿಸಿದ ವೈದ್ಯಕೀಯ ತಂಡ, ಸಿಬ್ಬಂದಿ ಹಾಗೂ ಹಿತೈಷಿಗಳಿಗೆ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದೆ.

“ಎನ್‌ಎಬಿಎಚ್ ಪ್ರಮಾಣ ಪತ್ರದಲ್ಲಿ ನಮ್ಮ ಸಂಸ್ಥೆಯ ಆಯುರ್ವೇದ, ಪಂಚಕರ್ಮ, ಪ್ರಕೃತಿ ಚಿಕಿತ್ಸೆ ಹಾಗೂ ಯೋಗ—ಈ ನಾಲ್ಕೂ ಸೇವೆಗಳಿಗೆ ಒಂದೇ ಬಾರಿಗೆ ಮಾನ್ಯತೆ ಲಭಿಸಿದ್ದು ಕರ್ನಾಟಕದಲ್ಲೇ ಪ್ರಥಮ ಎಂಬುದು ಅತ್ಯಂತ ಸಂತಸದ ವಿಷಯ.” — ಡಾ. ವೆಂಕಟರಮಣ ಹೆಗಡೆ, ಮುಖ್ಯ ವೈದ್ಯಕೀಯ ಅಧೀಕ್ಷಕರು, ನಿಸರ್ಗಮನೆ ಶಿರಸಿ.

About The Author

error: Content is protected !!