November 23, 2026

ರೈತ ಸಂಘದ ತಾಲೂಕಾಧ್ಯಕ್ಷರಾಗಿ ಯಂಕಾನಾಯ್ಕ ಆಯ್ಕೆ

ಅರಣ್ಯ ಭೂಮಿ ಸಾಗುವಳಿದಾರರ ಹಕ್ಕಿಗಾಗಿ ಬೀದಿಗಿಳಿದು ಹೋರಾಟ: ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎನ್. ಭರ್ಮಣ್ಣ ಕರೆ

ಹಗರಿಬೊಮ್ಮನಹಳ್ಳಿ (ವಿಜಯನಗರ): ಕರ್ನಾಟಕ ರಾಜ್ಯ ರೈತ ಸಂಘ (ಹೆಚ್.ಆರ್. ಬಸವರಾಜಪ್ಪ ಬಣ) ಹಾಗೂ ಹಸಿರು ಸೇನೆಯ ಹಗರಿಬೊಮ್ಮನಹಳ್ಳಿ ತಾಲೂಕು ಅಧ್ಯಕ್ಷರಾಗಿ ವ್ಯಾಸನಕೇರಿ ತಾಂಡಾದ ಬಿ.ಎಸ್. ಯಂಕಾನಾಯ್ಕ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎನ್. ಭರ್ಮಣ್ಣ ಅವರ ನೇತೃತ್ವದಲ್ಲಿ ಜರುಗಿದ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ನೂತನ ಪದಾಧಿಕಾರಿಗಳಿಗೆ ಆಯ್ಕೆ ಪ್ರಮಾಣ ಪತ್ರ ವಿತರಿಸಲಾಯಿತು.

ನೂತನ ಪದಾಧಿಕಾರಿಗಳ ವಿವರ:

  • ಗೌರವಾಧ್ಯಕ್ಷರು: ಸಿ.ಹೆಚ್. ರವಿಕುಮಾರ
  • ಉಪಾಧ್ಯಕ್ಷರು: ಹೆಚ್. ಹನುಮಂತಪ್ಪ ಹಾಗೂ ಜೆ. ಮಾನಸಾಬ್
  • ಪ್ರಧಾನ ಕಾರ್ಯದರ್ಶಿ: ಗಾಳೆಮ್ಮನವರ ಹುಲುಗಪ್ಪ
  • ಸಂಘಟನಾ ಕಾರ್ಯದರ್ಶಿ: ಬಣಕಾರ ರಮೇಶ
  • ಕಾರ್ಯದರ್ಶಿ: ಕೆ. ಮಲ್ಲಪ್ಪ
  • ಸಂಚಾಲಕರು: ಎ.ಎಸ್. ಕೊಟ್ರೇಶ
  • ಸಹ ಕಾರ್ಯದರ್ಶಿ: ಹೆಚ್.ಟಿ. ತೀರ್ಥಪ್ರಸಾದ್

ಸಾಗುವಳಿ ಹಕ್ಕಿಗಾಗಿ ನಿರಂತರ ಹೋರಾಟ: ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಎನ್. ಭರ್ಮಣ್ಣ, “ಅರಣ್ಯದಂಚಿನ ಬಡ ರೈತರ ಸಾಗುವಳಿ ಕೃಷಿ ಭೂಮಿಯ ಉಳಿವಿಗಾಗಿ ಕಾನೂನಾತ್ಮಕ ಹೋರಾಟದ ಜೊತೆಗೆ ಅಗತ್ಯವಿದ್ದರೆ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು. ಅರ್ಹ ಬಡ ಸಾಗುವಳಿದಾರರಿಗೆ ಸರ್ಕಾರ ಹಕ್ಕುಪತ್ರ ವಿತರಿಸುವವರೆಗೆ ವಿಶ್ರಮಿಸುವುದಿಲ್ಲ” ಎಂದರು. ಅಲ್ಲದೆ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸುವುದು ಸೇರಿದಂತೆ ವಿವಿಧ ಹಕ್ಕೊತ್ತಾಯಗಳ ಈಡೇರಿಕೆಗೆ ಒಗ್ಗಟ್ಟಿನಿಂದ ಹೋರಾಡಲು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಬುಡ್ಡಿ ಬಸವರಾಜ, ಜಿಲ್ಲಾ ಉಪಾಧ್ಯಕ್ಷ ಭಂಟರ ಸೋಮಣ್ಣ, ಪ್ರಮುಖರಾದ ಹರಾಳು ಜಿ. ಅಂಜಿನಪ್ಪ, ಕೋಟೆ ಬಸಪ್ಪ, ಮರಳಿ ಸಿದ್ದಪ್ಪ, ಸೊನ್ನ ನಾಗಪ್ಪ, ಬನ್ನಿಕಲ್ಲು ಕೆ. ನಾಗರಾಜ, ಬಲ್ಲಹುಣುಸೆ ನಾಗರಾಜ, ಲಿಂಗರಾಜು ಯಾದವ, ಯಲ್ಲಪ್ಪ, ಬಣಕಾರ ಕರಿಯಪ್ಪ, ಸಾಹುಕಾರ ಕೊಟ್ರೇಶ, ಕೆ. ನಜೀರ್ ಸಾಬ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

– ವರದಿ: ವಿ.ಜಿ. ವೃಷಭೇಂದ್ರ, ಕೂಡ್ಲಿಗಿ

About The Author

error: Content is protected !!