

ಭಟ್ಕಳ : ದಿನಾಂಕ 20 ಫೆಬ್ರವರಿ 2026 ಶುಕ್ರವಾರದಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೆಮಡಿ ಇಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಕ್ಷೇತ್ರ ಸಮನ್ವಯಾಧಿಕಾರಿಗಳಾಗಿರುವ ಶ್ರೀಮತಿ ಪೂರ್ಣಿಮಾ ಅವರು ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ SDMC ಅಧ್ಯಕ್ಷರು, ಉಪಾಧ್ಯಕ್ಷರು ಮುಖ್ಯ ಶಿಕ್ಷಕರು,
ಎಲ್ಲಾ ಸಹ ಶಿಕ್ಷಕರುಗಳು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರಾಘವೇಂದ್ರ ಮಡಿವಾಳ್ ಮತ್ತು ಎಲ್ಲಾ ಪಾಲಕ ಪೋಷಕ ವರ್ಗದವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವೆಂಕಟೇಶ ನಾಯಕ ಅವರು ಆಗಮಿಸಿ, ಸಂತೆಯನ್ನು ವೀಕ್ಷಿಸಿ ಹೆಮ್ಮೆಯ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಸುಮಾರು 40 ಅಂಗಡಿ ಮಳಿಗೆಗಳು ಕಾರ್ಯನಿರ್ವಹಿಸಿದವು. ಇದರಲ್ಲಿ ಮಕ್ಕಳೇ ಸ್ಯಾಂಡ್ವಿಚ್, ಪಾನಿಪುರಿ, ಗೋಬಿ ಮಂಚೂರಿ, ಜ್ಯೂಸ್ ಸಲಾಡ್, ತಯಾರು ಮಾಡಿ ಕೊಟ್ಟಿರುವುದು ಬಹಳ ವಿಶೇಷವಾಗಿತ್ತು,
ತರಕಾರಿ, ಸೊಪ್ಪುಗಳು, ಕಾಯಿಪಲ್ಲೆ ಖಾದ್ಯಗಳು, ಒಣ ಮೀನು, ಸಿಯಾಳ, ಹಣ್ಣುಗಳು ಬಗೆ ಬಗೆಯ ತಿಂಡಿ ತಿನಿಸುಗಳು ಮತ್ತು ದಿನಬಳಕೆಯ ವಸ್ತುಗಳು ಎಲ್ಲರ ಮನಸೆಳೆಯಿತು.
ಬಂದಂತಹ ಎಲ್ಲರೂ ಮಕ್ಕಳೊಡನೆ ವ್ಯಾಪಾರ ಮಾಡುತ್ತಾ ಮನರಂಜಿಸಿದರು. ಉದ್ಘಾಟಕರು ಮಾತನಾಡುತ್ತಾ ಇಂತಹ ಕಾರ್ಯಕ್ರಮಗಳನ್ನು ಮಾಡುವುದರಿಂದ ಮಕ್ಕಳಲ್ಲಿ ವ್ಯವಹಾರಿಕ ಗಣಿತದ ಜ್ಞಾನ ,ಕೌಶಲ್ಯ ಅಭಿವೃದ್ಧಿಯಾಗುವುದು ಎಂದು ಹೇಳಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಶ್ರೀ ಸಾರಿಂಗ ಟಿ.ಮುಕ್ರಿ,ಮುಖ್ಯ ಶಿಕ್ಷಕರು ಸ್ವಾಗತಿಸಿದರು. ಶ್ರೀಮತಿ ಸತ್ಯವತಿಯವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

About The Author




More Stories
ತೆರೆದ ಚರಂಡಿ ಹೊಂಡ: ಅಪಾಯದ ನಡುವೆ ಭಟ್ಕಳದ ವಾಹನ ಸವಾರರ ಸಂಚಾರ.
ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಮಂಕಾಳ್ ಎಸ್. ವೈದ್ಯ ಆಯ್ಕೆ: ಮಾಜಿ ಸಚಿವರಿಗೆ ಭಟ್ಕಳದಲ್ಲಿ ಅದ್ಧೂರಿ ಸ್ವಾಗತ.
ಆಗಸ್ಟ್ 18ರಂದು ಭಟ್ಕಳದಲ್ಲಿ ಬೃಹತ್ ರಕ್ತದಾನ ಶಿಬಿರ: ಡಾ. ಸುರೇಶ ನಾಯಕ್ ಸ್ಮರಣಾರ್ಥ ಆಯೋಜನೆ