

ಅಂಕೋಲಾ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜನಪ್ರಿಯ ವಿಶ್ರಾಂತ ಉಪನ್ಯಾಸಕರಾದ ಮಹೇಶ ನಾಯಕ ಹಾಗೂ ಶೆಟಗೇರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿಯಾಗಿರುವ ಅವರ ಪತ್ನಿ ಶಾಂತಲಾ ನಾಯಕ ದಂಪತಿಯನ್ನು ‘ಕನ್ನಡ ಚಂದ್ರಮ’ ಉತ್ತರ ಕನ್ನಡ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪಟ್ಟಣದ ನಾಡವರ ಸಂಘದ ಗಾಂಧಿ ನಿವಾಸದ ಲಕ್ಷ್ಮೀರಮಣ ಭವನದಲ್ಲಿ ಈ ಸನ್ಮಾನ ಕಾರ್ಯಕ್ರಮ ಜರುಗಿತು.

ನಿವೃತ್ತಿ ಜೀವನಕ್ಕೆ ಶುಭ ಹಾರೈಕೆ: ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾದ ಸುಧೀರ ನಾಯಕರವರು ಮಹೇಶ ನಾಯಕರವರಿಗೆ ಶಾಲು ಹೊದಿಸಿ, ಹಾರ ಹಾಕಿ ಗೌರವಿಸಿ, ಅವರ ಸಾರ್ಥಕ ನಿವೃತ್ತಿ ಜೀವನಕ್ಕೆ ಶುಭ ಕೋರಿದರು.


ವಿಶೇಷ ಸ್ಮರಣಿಕೆ ಸಮರ್ಪಣೆ: ಕನ್ನಡ ಚಂದ್ರಮದ ಗೌರವಾಧ್ಯಕ್ಷರಾದ ಮಂಜುನಾಥ ಗಾಂವಕರ್ ಬರ್ಗಿಯವರು ‘ಶ್ರೀ ಕ್ಷೇತ್ರ ಗೋಕರ್ಣ ಪುರಾಣ’ದ ಉತ್ಕೃಷ್ಟ ಗ್ರಂಥದೊಂದಿಗೆ, ಮಹೇಶ ನಾಯಕರವರ ಸಾರ್ಥಕ ಬದುಕಿನ ಕುರಿತಂತೆ ‘ಸಾಗರ ಸಾಮ್ರಾಟ’ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ‘ಒಲವಿನ ಓಲೆ’ ಸ್ಮರಣಿಕೆಯನ್ನು ಮಹೇಶ ದಂಪತಿಗೆ ಆಪ್ತವಾಗಿ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಕನ್ನಡ ಚಂದ್ರಮದ ಅಧ್ಯಕ್ಷರಾದ ಜಗದೀಶ ನಾಯಕ ಹೊಸ್ಕೇರಿ, ಹಿರೇಗುತ್ತಿ ಊರಿನ ಪ್ರಮುಖರಾದ ನೀಲಕಂಠ ನಾಯಕ, ಬಾವಿಕೇರಿ ಪ್ರೌಢಶಾಲೆಯ ಹಿರಿಯ ಶಿಕ್ಷಕರಾದ ಗಣಪತಿ ನಾಯಕ ಬೋಳೆ, ನಾಡುಮಾಸ್ಕೇರಿಯ ವಿನಾಯಕ ನಾಯಕ, ಪ್ರೊ. ಆರ್.ಎಸ್. ನಾಯಕ, ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯ ಕೋಶಾಧ್ಯಕ್ಷರಾದ ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರೌಢಶಾಲಾ ಮುಖ್ಯಾಧ್ಯಾಪಕ ಶಿವಚಂದ್ರ, ಉಪನ್ಯಾಸಕ ಹಾಗೂ ಪತ್ರಕರ್ತ ಮಾರುತಿ ಹರಿಕಂತ್ರ ಮತ್ತು ಮಹೇಶ್ ನಾಯಕರ ಚಿರಂಜೀವಿಗಳು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.


About The Author




More Stories
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಗಡಗೇರಿ ವಿದ್ಯಾರ್ಥಿನಿಯರ ಅದ್ಭುತ ಸಾಧನೆ – ಇನ್ಸ್ಪೈರ್ ಅವಾರ್ಡ್ಗೆ ಆಯ್ಕೆ
ಪದೋನ್ನತಿಗೊಂಡ ಸುಮಾ ಶೆಟ್ಟಿ
ಶ್ರೇಯಸ್ ಸಾಧನೆಗೆ ಬರ್ಗಿ ವಿದ್ಯಾಪೀಠದ ಪೇಟ