August 21, 2026

ಜನಜಾಗೃತಿ ವೇದಿಕೆ ಜಿಲ್ಲಾ ನೂತನ ಸಂಘಟನಾ ಅಧ್ಯಕ್ಷರಾಗಿ ವಾಮನ ಸುಬ್ರಾಯ ನಾಯ್ಕ್ ಸರ್ವಾನುಮತದಿಂದ ಆಯ್ಕೆ.

ಕಾರವಾರ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನೂತನ ಸಂಘಟನಾ ಅಧ್ಯಕ್ಷರಾಗಿ ಶ್ರೀ ವಾಮನ ಸುಬ್ರಾಯ ನಾಯ್ಕ್ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಅವರ ಈ ಆಯ್ಕೆಗೆ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ತುಂಬು ಹೃದಯದ ಶುಭಾಶಯಗಳು ಮತ್ತು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಜನಜಾಗೃತಿ ವೇದಿಕೆಯಿಂದ ಅಭಿನಂದನೆ:

ಸಮಾಜದಲ್ಲಿ ಮದ್ಯವರ್ಜನ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಜನಜಾಗೃತಿ ವೇದಿಕೆಯಲ್ಲಿ ವಾಮನ ಸುಬ್ರಾಯ ನಾಯ್ಕ್ ಅವರ ಸುದೀರ್ಘ ಅನುಭವ ಹಾಗೂ ಸಂಘಟನಾ ಸಾಮರ್ಥ್ಯ ಅಪಾರವಾದದ್ದು. ಅವರ ಆಯ್ಕೆಯಿಂದ ವೇದಿಕೆಯ ಸಂಘಟನಾತ್ಮಕ ಚಟುವಟಿಕೆಗಳು ಜಿಲ್ಲೆಯಾದ್ಯಂತ ಮತ್ತಷ್ಟು ಬಲಗೊಳ್ಳಲಿವೆ ಎಂದು ವೇದಿಕೆಯ ಪ್ರಮುಖರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶ್ರೀ ವಾಮನ ಸುಬ್ರಾಯ ನಾಯ್ಕ್ ಅವರಿಗೆ ಜನಜಾಗೃತಿ ವೇದಿಕೆಯ ಎಲ್ಲಾ ಪದಾಧಿಕಾರಿಗಳು ಮತ್ತು ಮುಖಂಡರು ಹೃತ್ಪೂರ್ವಕವಾಗಿ ಶುಭ ಕೋರಿದ್ದಾರೆ.

About The Author

error: Content is protected !!