October 22, 2026

ಶಿರಸಿಯಲ್ಲಿ ಅಕ್ಟೋಬರ್ 3ಕ್ಕೆ ‘ಕಂಸವಧೆ’ ತಾಳಮದ್ದಳೆ

ಶಿರಸಿ: ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ ವತಿಯಿಂದ ಅಕ್ಟೋಬರ್ 3ರಂದು ಸಂಜೆ 5:00 ಗಂಟೆಗೆ ನಗರದ ಟಿಎಂಎಸ್ ಸಭಾಂಗಣದಲ್ಲಿ ‘ಕಂಸವಧೆ’ ತಾಳಮದ್ದಳೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಹಿಮ್ಮೇಳ: ಭಾಗವತರಾಗಿ ಕೆಳಗಿನಕೇರಿ ಕೇಶವ ಹೆಗಡೆ ಹಾಗೂ ರವಿ ಮೂರೂರು, ಮದ್ದಳೆಯಲ್ಲಿ ಶಂಕರ ಭಾಗವತ್ ಯಲ್ಲಾಪುರ ಮತ್ತು ಚೆಂಡೆಯಲ್ಲಿ ಪ್ರಸನ್ನ ಹೆಗ್ಗಾರ್ ಸಹಕರಿಸಲಿದ್ದಾರೆ.

ಮುಮ್ಮೇಳ (ಅರ್ಥಧಾರಿಗಳು):

  • ಕೃಷ್ಣ: ವಿ. ಉಮಾಕಾಂತ ಭಟ್
  • ಕಂಸ: ಡಾ. ಗಣಪತಿ ಭಟ್ ಸಂಕಗುಂಡಿ
  • ಬಲರಾಮ: ಮೋಹನ ಭಾಸ್ಕರ ಹೆಗಡೆ ಹೆರವಟ್ಟ
  • ಅಕ್ರೂರ: ವಿನಯ ಹೊಸ್ತೋಟ

    ತಾಳಮದ್ದಳೆ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಯಕ್ಷಗಾನ ಹಾಗೂ ತಾಳಮದ್ದಳೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಟ್ರಸ್ಟ್‌ನ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ವಿನಂತಿಸಿದ್ದಾರೆ.

    About The Author

    error: Content is protected !!