
ನವೆಂಬರ್ ೬ರಂದು ಅಲ್ ವಕ್ರಾ DPS MIS ಆಡಿಟೋರಿಯಂನಲ್ಲಿ ಸಂಭ್ರಮ; ಮುಖ್ಯ ಅತಿಥಿಯಾಗಿ ಸಂಸದ ಡಾ. ಸಿ.ಎನ್. ಮಂಜುನಾಥ್ ಭಾಗಿ
ನಟಿ ಉಮಾಶ್ರೀ ಅವರಿಗೆ ‘ಕತಾರ್ ಕನ್ನಡ ಸಮ್ಮಾನ’ ಪ್ರಶಸ್ತಿ ಪ್ರದಾನ


ದೋಹಾ (ಕತಾರ್): ಭಾರತೀಯ ರಾಯಭಾರ ಕಚೇರಿಯ ಭಾರತೀಯ ಸಾಂಸ್ಕೃತಿಕ ಕೇಂದ್ರದ (ICC) ಸಂಯೋಜಿತ ಸಂಸ್ಥೆಯಾದ ‘ಕರ್ನಾಟಕ ಸಂಘ ಕತಾರ್’ (KSQ) ಆಯೋಜಿಸುತ್ತಿರುವ ೭೧ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮ “ಕರುನಾಡ ವೈಭವ-೨೦೨೬” ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗಿವೆ.


ಅಧಿಕೃತ ಪೋಸ್ಟರ್ ಬಿಡುಗಡೆಯಾದ ಬೆನ್ನಲ್ಲೇ, ಕಾರ್ಯಕ್ರಮ ಯಶಸ್ವಿಗೊಳಿಸಲು ಸಂಘದ ಪದಾಧಿಕಾರಿಗಳು ಹಾಗೂ ಸ್ವಯಂಸೇವಕರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಈ ವೈಭವೋಪೇತ ಸಾಂಸ್ಕೃತಿಕ ಕಾರ್ಯಕ್ರಮವು ೨೦೨೬ರ ನವೆಂಬರ್ ೬, ಶುಕ್ರವಾರದಂದು ಸಂಜೆ ೪:೦೦ ಗಂಟೆಯಿಂದ ಅಲ್ ವಕ್ರಾ ಬಳಿಯ DPS MIS ಆಡಿಟೋರಿಯಂನಲ್ಲಿ ನಡೆಯಲಿದೆ.
ಮುಖ್ಯ ಅತಿಥಿಯಾಗಿ ಡಾ. ಸಿ.ಎನ್. ಮಂಜುನಾಥ್ ಭಾಗಿ: ಪ್ರಸಿದ್ಧ ಹೃದ್ರೋಗ ತಜ್ಞರು, ಪದ್ಮಶ್ರೀ ಪುರಸ್ಕೃತರು ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ಸಿ.ಎನ್. ಮಂಜುನಾಥ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕರಾಗಿ ವೈದ್ಯಕೀಯ ಕ್ಷೇತ್ರಕ್ಕೆ ಅವರು ನೀಡಿದ ಅಪಾರ ಕೊಡುಗೆಯಿಂದಾಗಿ, ಅವರ ಭೇಟಿಯು ಕತಾರ್ನಲ್ಲಿರುವ ಅನಿವಾಸಿ ಕನ್ನಡಿಗರಲ್ಲಿ ಹೆಚ್ಚಿನ ಉತ್ಸಾಹ ಮೂಡಿಸಿದೆ.
ಉಮಾಶ್ರೀ ಅವರಿಗೆ ‘ಕತಾರ್ ಕನ್ನಡ ಸಮ್ಮಾನ’: ಸಮಾರಂಭದಲ್ಲಿ ಖ್ಯಾತ ಹಿರಿಯ ಚಲನಚಿತ್ರ ನಟಿ, ಮಾಜಿ ಸಚಿವರೂ ಆದ ಶ್ರೀಮತಿ ಉಮಾಶ್ರೀ ಅವರಿಗೆ ಪ್ರತಿಷ್ಠಿತ ‘ಕತಾರ್ ಕನ್ನಡ ಸಮ್ಮಾನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಇದರೊಂದಿಗೆ ಕರ್ನಾಟಕದ ಖ್ಯಾತ ಕಲಾವಿದರಿಂದ ಹಾಸ್ಯ, ಸಂಗೀತ ಹಾಗೂ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಲಿವೆ.
ಸಾಂಸ್ಕೃತಿಕ ತರಬೇತಿ ಹಾಗೂ ಅಂತಿಮ ಸಿದ್ಧತೆ: ಸ್ಥಳೀಯ ಕನ್ನಡ ಕಲಾವಿದರು, ಹಿರಿಯರು ಮತ್ತು ಮಕ್ಕಳು ನೃತ್ಯ, ನಾಟಕ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳ ಅಂತಿಮ ಹಂತದ ಅಭ್ಯಾಸದಲ್ಲಿ ತೊಡಗಿದ್ದಾರೆ. ವೇದಿಕೆ ವಿನ್ಯಾಸ, ಸಾಂಪ್ರದಾಯಿಕ ಅಲಂಕಾರ ಹಾಗೂ ಪ್ರೇಕ್ಷಕರ ನಿರ್ವಹಣೆಯ ವ್ಯವಸ್ಥೆಗಳನ್ನು ಸಮರ್ಪಕವಾಗಿ ಪೂರ್ಣಗೊಳಿಸಲಾಗುತ್ತಿದೆ.
ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು, ಆಡಳಿತ ಸಮಿತಿ ಹಾಗೂ KSQ ಸಲಹೆಗಾರರ ನೇತೃತ್ವದಲ್ಲಿ ಕಾರ್ಯಕ್ರಮದ ಪ್ರತಿಯೊಂದು ವಿಭಾಗದ ಸಿದ್ಧತೆಗಳು ಮುಕ್ತಾಯದ ಹಂತಕ್ಕೆ ತಲುಪಿವೆ.

More Stories
‘ಕರುನಾಡ ವೈಭವ-2026’ ವೇದಿಕೆಯಲ್ಲಿ ಡಾ. ಸಿ.ಎನ್. ಮಂಜುನಾಥ್ ದಂಪತಿಗೆ ಅದ್ದೂರಿ ಗೌರವ ಸನ್ಮಾನ
ಕೇಂದ್ರ ಸಚಿವ ಡಾ. ಚಂದ್ರಶೇಖರ್ ಪೆಮ್ಮಸಾನಿ ಭೇಟಿಯಾದ ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು
ಕರ್ನಾಟಕ ಸಂಘ ಕತಾರ್ನಿಂದ 71ನೇ ರಾಜ್ಯೋತ್ಸವ; ‘ಕರುನಾಡ ವೈಭವ-2026’ ವೈಭವೋಪೇತ ಆಚರಣೆ