March 29, 2026

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಗಡಗೇರಿ ವಿದ್ಯಾರ್ಥಿನಿಯರ ಅದ್ಭುತ ಸಾಧನೆ – ಇನ್ಸ್ಪೈರ್ ಅವಾರ್ಡ್‌ಗೆ ಆಯ್ಕೆ

ಅಂಕೋಲಾ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಗಡಗೇರಿಯ ವಿದ್ಯಾರ್ಥಿನಿಯರಾದ ಕುಮಾರಿ ಚಿತ್ರಾ ರಾಜು ಗೌಡ (ಆರನೇ ತರಗತಿ) ಹಾಗೂ ಕುಮಾರಿ ದೀಕ್ಷಿತಾ ಸುಭಾಷ್ ಗೌಡ (ಏಳನೇ ತರಗತಿ) ಅವರು 2025–26ನೇ ಸಾಲಿನ ಪ್ರತಿಷ್ಠಿತ ಇನ್ಸ್ಪೈರ್ ಅವಾರ್ಡ್‌ಗೆ ಆಯ್ಕೆಯಾಗಿರುವುದು ಶಾಲೆಗೆ ಹಾಗೂ ಗ್ರಾಮಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಈ ಸಾಧನೆ ಅವರ ಕಠಿಣ ಪರಿಶ್ರಮ, ಹೊಸ ಆಲೋಚನೆಗಳ ಮೆಲುಕು ಹಾಗೂ ವಿಜ್ಞಾನ ಮನೋಭಾವದ ಪ್ರತಿಫಲವಾಗಿದೆ. ಇಂತಹ ರಾಷ್ಟ್ರಮಟ್ಟದ ಗೌರವವನ್ನು ಪಡೆಯುವುದರ ಮೂಲಕ ಇವರು ತಮ್ಮ ಸಹಪಾಠಿಗಳಿಗೆ ಪ್ರೇರಣೆಯಾಗಿದ್ದು, ಶಾಲೆಯ ಶೈಕ್ಷಣಿಕ ಮಟ್ಟವನ್ನು ಇನ್ನಷ್ಟು ಉನ್ನತಿಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಈ ಸಾಧನೆಗೆ ಮಾರ್ಗದರ್ಶನ ನೀಡಿದ ಶಿಕ್ಷಕರ ಶ್ರಮ, ಪ್ರೋತ್ಸಾಹ ಮತ್ತು ಮಾರ್ಗದರ್ಶನ ವಿಶೇಷವಾಗಿ ಶ್ಲಾಘನೀಯವಾಗಿದೆ. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಶಿಕ್ಷಕ ವೃಂದ ಹಾಗೂ ಪಾಲಕ-ಪೋಷಕರು ವಿದ್ಯಾರ್ಥಿನಿಯರ ಸಾಧನೆಯನ್ನು ಹೃತ್ಪೂರ್ವಕವಾಗಿ ಅಭಿನಂದಿಸಿ, ಭವಿಷ್ಯದಲ್ಲಿಯೂ ಇಂತಹ ಇನ್ನಷ್ಟು ಸಾಧನೆಗಳನ್ನು ಮಾಡುವಂತೆ ಶುಭ ಹಾರೈಸಿದ್ದಾರೆ.

ಇಂದು ಸಾಧನೆಯ ಹೆಜ್ಜೆ ಇಟ್ಟ ಇವರು, ನಾಳೆಯ ವಿಜ್ಞಾನಿಗಳಾಗಲಿ ಎಂಬುದು ಎಲ್ಲರ ಆಶಯ.”

ವರದಿ :ಎನ್. ರಾಮು ಹಿರೇಗುತ್ತಿ

About The Author

error: Content is protected !!