ಕೆ ಆರ್ ಪೇಟೆ : ಬೆಂಗಳೂರು ನಗರದ ಅನುಭವ ಮಂಟಪ, ಬಸವ ಭವನದ ಸಹಯೋಗದಲ್ಲಿ ಬಸವೇಶ್ವರ ಸರ್ಕಲ್‌ನಲ್ಲಿ ಕಥಾ ನೃತ್ಯ ಆಂಗಣ ವತಿಯಿಂದ ಆಯೋಜಿಸಲಾದ ಇಂಡಿಯನ್ ಇಂಟರ್ ನ್ಯಾಷನಲ್ ಡ್ಯಾನ್ಸ್ ಫೆಸ್ಟಿವಲ್ (IIDF) ಅತ್ಯಂತ ವೈಭವದಿಂದ ನಡೆಯಿತು.
ಪ್ರಸಿದ್ಧ ನೃತ್ಯಗುರು ಶ್ರೀಮತಿ ಗಾರ್ಗಿ ಗೋಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಈ ಉತ್ಸವವು ಪದ್ಮವಿಭೂಷಣ ಪಂಡಿತ್ ಬಿರ್ಜು ಮಹಾರಾಜ್ ಹಾಗೂ ವಿದುಷಿ ದುರ್ಗಾ ಆರ್ಯ ಅವರ ಆಶ್ರಯದಲ್ಲಿ ಬೆಳೆದು ಬಂದ ನೃತ್ಯ ಪರಂಪರೆಯ ಸೊಬಗನ್ನು ಪ್ರತಿಬಿಂಬಿಸಿತು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಕಲಾವಿದರು ತಮ್ಮ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಿ ಪ್ರೇಕ್ಷಕರ ಮನ ಗೆದ್ದರು.
ಈ ಮಹೋತ್ಸವದಲ್ಲಿ ಒಟ್ಟು 21 ಸೊಲೋ ಪ್ರದರ್ಶನಗಳು ಮತ್ತು 105 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ವೈವಿಧ್ಯಮಯ ನೃತ್ಯ ಶೈಲಿಗಳನ್ನು ಪರಿಚಯಿಸಿದವು. ಕೇರಳ, ವಾರಣಾಸಿ, ಕೊಲ್ಕತ್ತಾ, ಮಹಾರಾಷ್ಟ್ರ, ದೆಹಲಿ, ಚೆನ್ನೈ ಸೇರಿದಂತೆ ಹಲವು ರಾಜ್ಯಗಳಿಂದ ಕಲಾವಿದರು ಆಗಮಿಸಿ ಭಾರತೀಯ ಸಂಸ್ಕೃತಿಯ ವೈಭವವನ್ನು ವೇದಿಕೆಯಲ್ಲಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಂಗಳೂರು ದೂರದರ್ಶನ ಕೇಂದ್ರದ ವಿಶ್ರಾಂತ ಕಾರ್ಯಕ್ರಮ ನಿರ್ದೇಶಕಿ ಡಾ.ನಿರ್ಮಲ ಎಲಿಗಾರ್ ಮಾತನಾಡಿ ನೃತ್ಯವು ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತಿ ಸಮರ್ಪಣಾ ವೇದಿಕೆಯಾಗಿದೆ. ಭರತನಾಟ್ಯ ಸೇರಿದಂತೆ ಶಾಸ್ತ್ರೀಯ ನೃತ್ಯ ಕಲೆಗಳು ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಒಂದು ಭಾಗವಾಗಿದ್ದು ಭಗವಂತನ ಸಾಕ್ಷಾತ್ಕಾರವನ್ನು ಹೊಂದಲು ದಾರಿಮಾರ್ಗ ವಾಗಿವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿದುಷಿ ದುರ್ಗಾ ಆರ್ಯ, ಅಹಲ್ಯಾ ಫೌಂಡೇಷನ್ ಸಂಸ್ಥಾಪಕಿ ಶ್ರೀಮತಿ ಎನ್.ಎಸ್. ಮಹಾಲಕ್ಷ್ಮಿ, ಡಾ.ನಿರ್ಮಲಾ ಯಲಿಗಾರ್ , ಶ್ರೀಮತಿ ಇಂದಿರಾ ಶಾಂತಕುಮಾರ್, ಶ್ರೀಮತಿ ಲತಾ ಪೂರ್ವನಿಕ್, ಶ್ರೀಮತಿ ಮಧುರಾ ಅಶೋಕ್ ಕುಮಾರ್ ಹಾಗೂ ಶ್ರೀಮತಿ ಶೋಭಾ ಮಹೇಶ್ ಉಪಸ್ಥಿತರಿದ್ದು, ಕಲಾವಿದರನ್ನು ಪ್ರೋತ್ಸಾಹಿಸಿ ಅಭಿನಂದಿಸಿದರು.
ಕಲಾ ಮಂಡಲಂ ತಂಡದ ಶ್ರೀಮತಿ ಶ್ರೀಜಾ ಆರ್. ಕೃಷ್ಣನ್, ಶ್ರೀ ಸತ್ಯನಾರಾಯಣ ಎನ್ ಹಾಗೂ ಶ್ರೀಮತಿ ಸಾವಿತ್ರಿ ಅರವಿಂದ್ ಅವರ ನೃತ್ಯ ಪ್ರದರ್ಶನಗಳು ವಿಶೇಷ ಆಕರ್ಷಣೆಯಾಗಿದ್ದು, ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದವು.
ಈ ಉತ್ಸವವು ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸುವುದರ ಜೊತೆಗೆ ಭಾರತೀಯ ನೃತ್ಯ ಪರಂಪರೆಯನ್ನು ಉಳಿಸಿ ಬೆಳೆಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಗಣ್ಯರು ಹೇಳಿದರು. ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

More Stories
ಕೃಷ್ಣರಾಜಪೇಟೆ ಪಟ್ಟಣದಲ್ಲಿ ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಹಬ್ಬವನ್ನು ಆಚರಿಸಿದ ಮುಸ್ಲಿಂ ಬಾಂಧವರು ..
ವಿದ್ಯಾರ್ಥಿಗಳು ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡು ಸಾಧನೆ ಮಾಡಿ, ಅಂತಾರಾಷ್ಟ್ರೀಯ ಜಾನಪದ ಕಲಾವಿದ ಡಾ.ಅಮ್ಮ ರಾಮಚಂದ್ರ ಕರೆ.
ಶಿಕ್ಷಕರು ವಿದ್ಯಾರ್ಥಿಗಳನ್ನು ಕೇವಲ ಅಂಕವೀರರನ್ನಾಗಿ ರೂಪಿಸದೆ ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯ ಮೂಲಕ ಉತ್ತಮವಾದ ಸಂಸ್ಕಾರ ನೀಡಿ ಭವಿಷ್ಯದ ನಾಗರೀಕರನ್ನಾಗಿ ಸಜ್ಜುಗೊಳಿಸಬೇಕು. ಡಾ.ಪಿ. ಹರೀಶ್ ಕರೆ.