ಭಟ್ಕಳ:ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪಟ್ಟಣದ ವಡೇರ ಮಠದಲ್ಲಿ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗಳ ನೇತೃತ್ವದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.

ಈ ಸಂದರ್ಭದಲ್ಲಿ ಸಮಾಜ ಬಾಂಧವರಿಗೆ ಸಸಿಗಳನ್ನು ವಿತರಿಸುವ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಶ್ರೀಗಳು ತಿಳಿಸಿದರು.
ಪುರುಷೋತ್ತಮ ಶ್ಯಾನಭಾಗ ಅವರ ಧರ್ಮಪತ್ನಿ ದಿವಂಗತ ಸುನೀತಾ ಪುರುಷೋತ್ತಮ ಶ್ಯಾನಭಾಗ ಅವರ ಸ್ಮರಣಾರ್ಥ, ಪುತ್ರ ಕಿರಣ ಶ್ಯಾನಭಾಗ ಅವರ ಸಹಯೋಗದಲ್ಲಿ ಒಂದು ಗಿಡ ಅಮ್ಮನ ಹೆಸರಲ್ಲಿ ಎಂಬ ವಿನೂತನ ಪರಿಕಲ್ಪನೆಯಡಿ ಸಮಾಜದ ಸದಸ್ಯರಿಗೆ ಸಸಿಗಳನ್ನು ವಿತರಿಸಲಾಯಿತು. ಪ್ರತಿಯೊಂದು ಕುಟುಂಬವೂ ಕನಿಷ್ಠ ಒಂದು ಗಿಡವನ್ನು ನೆಟ್ಟು ಅದನ್ನು ಪೋಷಿಸುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ಸಾರಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗಳು ಗಿಡಕ್ಕೆ ನೀರು ಎರೆಯುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು. ಬಳಿಕ ಮಹಿಳಾ ಮಂಡಳಿ ಅಧ್ಯಕ್ಷೆ ಸುನೀತಾ ಪೈ, ಜಿಎಸ್‌ಬಿ ಸಮಾಜದ ಗೌರವಾಧ್ಯಕ್ಷ ಸುರೇಂದ್ರ ಶ್ಯಾನಭಾಗ, ಜಿಎಸ್‌ಎಸ್ ಅಧ್ಯಕ್ಷ ಗಿರಿಧರ ನಾಯಕ, ಪತ್ರಕರ್ತ ರಾಮಚಂದ್ರ ಕಿಣಿ, ವಡೇರ ಮಠದ ಅರ್ಚಕ ಕಿಶೋರ ಭಟ್ ಹಾಗೂ ಸೇವಾಕರ್ತ ಕಿರಣ ಶ್ಯಾನಭಾಗ ಅವರಿಗೆ ಸಸಿಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಪರಿಸರ ಸಂರಕ್ಷಣೆ ಇಂದಿನ ಕಾಲಘಟ್ಟದ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಮೂಲಕ ಪ್ರಕೃತಿಯ ಉಳಿವಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮವನ್ನು ಮಂಜುನಾಥ ಪ್ರಭು ನಿರ್ವಹಿಸಿದರು. ಜಿಎಸ್‌ಬಿ ಸಮಾಜದ ಅಧ್ಯಕ್ಷ ನಾಗೇಶ ಕಾಮತ, ಹರೀಶ ನಾಯಕ ಸೇರಿದಂತೆ ಸಮಾಜದ ಪ್ರಮುಖರು, ಮಹಿಳಾ ಮಂಡಳಿ ಸದಸ್ಯರು ಹಾಗೂ ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

More Stories
ಹಂಗಾರಖಂಡದಲ್ಲಿ ಅದ್ದೂರಿ ವನಮಹೋತ್ಸವ: ನದಿ ಅಂಚಿನಲ್ಲಿ ಹಸಿರು ಕ್ರಾಂತಿ, ಪ್ರಕೃತಿ ರಕ್ಷಣೆಗೆ ಕರೆ
ವಡೇರ ಮಠದಲ್ಲಿ ಲಕ್ಷ ಕುಂಕುಮಾರ್ಚನೆ ಸಂಭ್ರಮ; 200ಕ್ಕೂ ಅಧಿಕ ಮಹಿಳೆಯರಿಂದ ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ
ಚಿಪ್ಪೆಕಲ್ಲು ದುರಂತದ 11 ಮೃತರ ಸ್ಮರಣೆಗೆ 11 ಗಿಡ ನೆಟ್ಟು ಗೌರವ ಸಲ್ಲಿಸಿದ ಮಂಕಾಳ ವೈದ್ಯ