August 23, 2026

ಮದಭಾವಿ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ – ಭಕ್ತಿಭಾವದ ಪಲ್ಲಕ್ಕಿ ಮೆರವಣಿಗೆ

ಅಥಣಿ: ತಾಲೂಕಿನ ಮದಭಾವಿ ಗ್ರಾಮದ ಅವಳೆ ಗಲ್ಲಿಯಲ್ಲಿ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವವು ಅತ್ಯಂತ ಸಡಗರ, ಸಂಭ್ರಮ ಹಾಗೂ ಭಕ್ತಿಭಾವದಿಂದ ಜರುಗಿತು. ಊರಿನ ಗೌಡರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಗ್ರಾಮಸ್ಥರು ಒಟ್ಟಾಗಿ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಿದರು.

ಉಡಿ ತುಂಬುವ ಸೇವೆ ಹಾಗೂ ಪೂಜೆ: ದೇವಸ್ಥಾನದಿಂದ ದೇವಿಯ ಭವ್ಯ ಪಲ್ಲಕ್ಕಿ ಮೆರವಣಿಗೆಯು ಭಕ್ತರ ಜಯಘೋಷದೊಂದಿಗೆ ಹೊರಟು ಊರಿನ ಗೌಡರ ಮನೆಗೆ ಆಗಮಿಸಿತು. ಈ ಸಂದರ್ಭದಲ್ಲಿ ಪ್ರವೀಣ ಗೌಡರು ಹಾಗೂ ಪ್ರೇಮಗೌಡರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಸಾಂಪ್ರದಾಯಿಕವಾಗಿ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಿದರು.

ಪುರವಂತರ ಸೇವೆ ಮತ್ತು ಧಾರ್ಮಿಕ ವಿಧಿಗಳು: ಮೆರವಣಿಗೆಯು ಮರಳಿ ದೇವಸ್ಥಾನಕ್ಕೆ ತಲುಪಿದ ಬಳಿಕ, ಪುರವಂತರ ವಿಶೇಷ ಸೇವೆ ಜರುಗಿತು. ಭಕ್ತಾದಿಗಳು ದೇವಿಗೆ ನೈವೇದ್ಯ ಅರ್ಪಿಸಿ, ಹರಕೆಗಳನ್ನು ತೀರಿಸುವ ಮೂಲಕ ದೇವಿಯ ಕೃಪೆಗೆ ಪಾತ್ರರಾದರು.

ಕಾರ್ಯಕ್ರಮದ ಪ್ರಮುಖ ಸ್ಥಾನದಲ್ಲಿ ಮಹಾದೇವ ನಾಯಿಕ, ಆದಿತ್ಯ ನಾಯಿಕ, ಸೃಷ್ಟಿ ನಾಯಿಕ ಹಾಗೂ ಅಖಿಲೇಶ ನಾಯಿಕ ಉಪಸ್ಥಿತರಿದ್ದರು. ಹಾಗೆಯೇ ಕೆ.ಪಿ.ಕೆ.ಎ.ಎಸ್‌ ಮುಖಂಡರಾದ ಅಶೋಕ ಬಡಿಗೇರ ಮತ್ತು ಯಾಸಿನ್ ನದಾಪ ಭಾಗವಹಿಸಿದ್ದರು.

ಅವಳೆ ಸಮಾಜದ ಮುಖಂಡರಾದ ವಿಠಲ ಅವಳೆ, ಲಕ್ಷ್ಮಣ ಅವಳೆ, ಅಪ್ಪು ಅವಳೆ, ಪಿಂಟು ಅವಳೆ, ಭರಮು ಮಾದರ, ಉದಯ ಅವಳೆ, ಹಣಮಂತ ಅವಳೆ, ನಾರಾಯಣ ಅವಳೆ, ಮಾರುತಿ ಅವಳೆ, ಶಶಿಕಾಂತ ಅವಳೆ, ಗೋಪಾಲ ಅವಳೆ, ಕುಶಪ್ಪಾ ಅವಳೆ, ದಾದಾಸಾಬ ಅವಳೆ, ಸದಾಶಿವ ಅವಳೆ, ಶಿವಾನಂದ ಅವಳೆ, ಶ್ರೀಕಾಂತ ಅವಳೆ ಸೇರಿದಂತೆ ಸಮಾಜದ ಹಿರಿಯರು, ಯುವಕರು ಹಾಗೂ ಅಪಾರ ಸಂಖ್ಯೆಯ ಮಹಿಳೆಯರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.           ವರದಿ : ಮಹೇಶ ಶರ್ಮ

About The Author

error: Content is protected !!