ಕಿಕ್ಕೇರಿ: ಫಿನ್ಲ್ಯಾಂಡ್ನ ಲಾಹ್ತಿಯಲ್ಲಿ ನಡೆದ ಅಂತರಾಷ್ಟ್ರೀಯ ಅಂಕವಿಲರ ಪ್ಯಾರಾ ಟೇಬಲ್ ಟೆನಿಸ್ ಟೂರ್ನಮೆಂಟ್ನಲ್ಲಿ ಹೆಗ್ಗಡಹಳ್ಳಿ ಗ್ರಾಮದ ಯುವಕ ಜಗನ್ನಾಥ್ ಹೆಚ್.ಎಂ ಪ್ರಥಮ ಸ್ಥಾನ ಗಳಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಸಾಧನೆಯ ವಿವರ: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹೆಗ್ಗಡಹಳ್ಳಿಯ ಮಂಜೇಗೌಡ ಅವರ ಪುತ್ರ ಜಗನ್ನಾಥ್ ಎಚ್.ಎಂ, ಪುರುಷರ ಸಿಂಗಲ್ಸ್ ವೀಲ್ ಚೇರ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ಆಗಸ್ಟ್ 28 ರಿಂದ 30 ರವರೆಗೆ ಫಿನ್ಲ್ಯಾಂಡ್ನಲ್ಲಿ ನಡೆದ ಈ ಕೂಟದ ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಗಳಿಸುವ ಮೂಲಕ ಮಂಡ್ಯ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯದ ಗೌರವವನ್ನು ಹೆಚ್ಚಿಸಿದ್ದಾರೆ.
ಈ ಅದ್ಭುತ ಸಾಧನೆಗೈದ ಗ್ರಾಮೀಣ ಪ್ರತಿಭೆ ಜಗನ್ನಾಥ್ ಅವರಿಗೆ ತಾಲೂಕಿನ ಗಣ್ಯರು ಹಾಗೂ ಸಾರ್ವಜನಿಕರು ಶುಭ ಹಾರೈಸಿದ್ದಾರೆ. ವರದಿ : ಶಂಭು ಕಿಕ್ಕೆರಿ

About The Author


More Stories
ಗಂಗೇನಹಳ್ಳಿ ಕೆರೆಗೆ ನೀರು ತುಂಬಿಸುವಂತೆ ಗ್ರಾಮಸ್ಥರ ಆಗ್ರಹ: ಹೇಮಾವತಿ ಇಲಾಖೆಗೆ ಮನವಿ
ಕಿಕ್ಕೇರಿ ಡೈರಿ ಅಧ್ಯಕ್ಷರಾಗಿ ಕೆ.ಟಿ. ರಮೇಶ್ ಎರಡನೇ ಬಾರಿಗೆ ಅವಿರೋಧ ಆಯ್ಕೆ.
ಮಾದಾಪುರ ಗೇಟ್ನಲ್ಲಿ ಎಲ್ಲಾ ವೇಗದೂತ ಬಸ್ಗಳ ನಿಲುಗಡೆಗೆ ಸರ್ಕಾರದಿಂದ ಆದೇಶ: ನಾಮಫಲಕ ಅಳವಡಿಕೆ