ಕೃಷ್ಣರಾಜಪೇಟೆ (ಮಂಡ್ಯ): ಪಟ್ಟಣದ ಕ್ರೈಸ್ಟ್ ದಿ ಕಿಂಗ್ ಪದವಿ ಪೂರ್ವ ಕಾಲೇಜಿನ 2026-27ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ನೂತನ ವಿದ್ಯಾರ್ಥಿಗಳಿಗೆ ‘ವಿದ್ಯಾಜ್ಯೋತಿ’ ಬೆಳಗುವ ಸಮಾರಂಭವು ಶ್ರೀ ಜಯಮ್ಮ ರಾಮಸ್ವಾಮಿ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ಜರುಗಿತು.
ದಿವ್ಯ ಸಾನಿಧ್ಯ ವಹಿಸಿದ್ದ ಹಾಸನ ಧರ್ಮಕೇಂದ್ರದ ಗುರು ಫಾ. ಪ್ಯಾಟ್ರಿಕ್ ಜೋನಸ್ ಮಾತನಾಡಿ, ಯುವಜನತೆ ಕೇವಲ ಅಂಕಗಳಿಕೆಯನ್ನೇ ಗುರಿಯಾಗಿಸಿಕೊಳ್ಳದೆ ಸಂಸ್ಕೃತಿ, ಸಂಸ್ಕಾರ ಹಾಗೂ ಸಹಬಾಳ್ವೆಯನ್ನು ಮೈಗೂಡಿಸಿಕೊಳ್ಳಬೇಕು. ದುಶ್ಚಟ ಹಾಗೂ ಮಾದಕ ವಸ್ತುಗಳ ವ್ಯಾಮೋಹದಿಂದ ದೂರವಿದ್ದು, ತಂದೆ-ತಾಯಂದಿರಿಗೆ ಗೌರವ ನೀಡಬೇಕು ಎಂದು ಕಿವಿಮಾತು ಹೇಳಿದರು.
ಆರ್.ಟಿ.ಓ ಮಲ್ಲಿಕಾರ್ಜುನ್ ಶುಭನುಡಿ: ಕಾರ್ಯಕ್ರಮ ಉದ್ಘಾಟಿಸಿದ ಸಮಾಜ ಸೇವಕ ಹಾಗೂ ಆರ್.ಟಿ.ಓ ಮಲ್ಲಿಕಾರ್ಜುನ್, ವಿದ್ಯಾರ್ಥಿ ಜೀವನವು ಮಹತ್ವದ ಸುವರ್ಣ ಘಟ್ಟವಾಗಿದ್ದು ಜ್ಞಾನ, ಸಂಸ್ಕಾರ ಮತ್ತು ಶಿಸ್ತಿನೊಂದಿಗೆ ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳಿಂದ ಪ್ರಮಾಣವಚನ: ಸಮಾರಂಭದಲ್ಲಿ ವಿದ್ಯಾರ್ಥಿಗಳು ಮೇಣದಬತ್ತಿ ಬೆಳಗಿ ಸದೃಢ, ಸುಸಂಸ್ಕೃತ ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರಮಾಣವಚನ ಸ್ವೀಕರಿಸಿದರು.

ಕಾಲೇಜಿನ ಪ್ರಾಂಶುಪಾಲ ಶಿವರಾಜು ಸ್ವಾಗತಿಸಿ, ಶಿಸ್ತು ಹಾಗೂ ಪರಿಶ್ರಮದ ಪ್ರಾಮುಖ್ಯತೆಯನ್ನು ತಿಳಿಸಿದರು. ಸಂಸ್ಥೆಯ ಕಾರ್ಯದರ್ಶಿ ಅಂತೋಣಿ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪುರಸಭಾ ಮಾಜಿ ಸದಸ್ಯ ಕೆ.ಆರ್. ನೀಲಕಂಠ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಟಿ.ವೈ. ಆನಂದ್, ಗಂಜಿಗೆರೆ ಮಹೇಶ್, ಉಪನ್ಯಾಸಕ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
About The Author


More Stories
ಪೌರಕಾರ್ಮಿಕ ಮಹಿಳೆಯರಿಗೆ ಬಾಗಿನ ಸಮರ್ಪಣೆ, ರಾಕಿ ಕಟ್ಟಿ ಗೌರವಿಸಿದ ಕೆ.ಆರ್.ಪೇಟೆ ಬಿಜೆಪಿ
ಪ್ರತಿ ಶನಿವಾರ ಹೋಬಳಿ ಮಟ್ಟದಲ್ಲಿ ‘ಪ್ರಜಾ ಸೇವಾ ಆಂದೋಲನ’: ಫಲಾನುಭವಿಗಳ ಮನೆ ಬಾಗಿಲಿಗೆ ಸರ್ಕಾರಿ ಸೇವೆ – ತಹಶೀಲ್ದಾರ್ ಶ್ರೇಯಸ್
ಹೊಯ್ಸಳ ವಾಸ್ತುಶಿಲ್ಪ ಶೈಲಿಯಲ್ಲಿ ಕಲ್ಲಹಳ್ಳಿಯ ಶ್ರೀ ಲಕ್ಷ್ಮಿ ವರಹನಾಥ ದೇವಾಲಯ ಅಭಿವೃದ್ಧಿ: ಡಾ. ಶ್ರೀನಿವಾಸ ರಾಘವನ್