ಸಿದ್ದಾಪುರ: ನಾಣಿಕಟ್ಟಾದ ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗದ ಆಶ್ರಯದಲ್ಲಿ ಸತತ 97ನೇ “ಯಕ್ಷ ವಂದನೆ – ಯಕ್ಷಪರ್ವ” ಸಮಾರಂಭದ ಭಾಗವಾಗಿ ‘ನಾಣಿಕಟ್ಟಾ ಯಕ್ಷರಾತ್ರಿ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಸಮಯ: ನವರಾತ್ರಿ ಹಬ್ಬದ ಸಂಭ್ರಮದ ಪ್ರಯುಕ್ತ ಅಕ್ಟೋಬರ್ 11, 2026ರ ಭಾನುವಾರ ರಾತ್ರಿ 8:01 ರಿಂದ ಕಾರ್ಯಕ್ರಮ ನಡೆಯಲಿದೆ.
ನಟರಾಜ ಎಂ. ಹೆಗಡೆ ಹಾಗೂ ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ ನಾಣಿಕಟ್ಟಾ (ಸಿದ್ದಾಪುರ, ಉತ್ತರ ಕನ್ನಡ) ಇವರ ನೇತೃತ್ವದಲ್ಲಿ ಈ ಯಕ್ಷಹಬ್ಬ ಜರುಗಲಿದೆ.
ಕಲಾಭಿಮಾನಿಗಳು, ಕಲಾ ಪೋಷಕರು ಹಾಗೂ ಕಲಾವಿದರ ಸಹಕಾರದೊಂದಿಗೆ ಯಶಸ್ವಿಯಾಗಿ ಸಾಗಿಬರುತ್ತಿರುವ ಈ ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಿ ಹಾರೈಸುವಂತೆ ಸಂಘಟಕರು ವಿನಂತಿಸಿದ್ದಾರೆ.

About The Author


More Stories
ಆಗಸ್ಟ್ 15ರಂದು ನಾಣಿಕಟ್ಟಾದಲ್ಲಿ ‘ಯಕ್ಷ ಶ್ರಾವಣ’ ಗಾನ ವೈಭವ: ಯಕ್ಷರಂಗದ ದೈತ್ಯ ದಿಗ್ಗಜರ ಸಮಾಗಮ
ಸಮಾಜಮುಖಿ ಚಿಂತಕ, ಪುಸ್ತಕ ಪ್ರೇಮಿ ಕಮಲಾಕರ ಭಂಡಾರಿ ಇನ್ನಿಲ್ಲ: ದೇಹದಾನಕ್ಕೆ ತೀರ್ಮಾನ
ತ್ಯಾಗಲಿಯಲ್ಲಿ ಯಶಸ್ವಿಯಾದ ಆಧಾರ್ ತಿದ್ದುಪಡಿ ಮೇಳ: 100ಕ್ಕೂ ಅಧಿಕ ಜನರಿಗೆ ಅನುಕೂಲ