October 22, 2026

ಮೊಳೆ ಗ್ರಾಮದ ಶಾಲೆಗೆ ಹಳೆ ವಿದ್ಯಾರ್ಥಿಗಳ ಕೊಡುಗೆ: ಡೆಸ್ಕ್ ಹಾಗೂ ಕಂಪ್ಯೂಟರ್ ನೀಡಿ ಋಣ ತೀರಿಸಿದ ಹಿರಿಯ ವಿದ್ಯಾರ್ಥಿಗಳು

ಅಥಣಿ: ಕಾಗವಾಡ ತಾಲೂಕಿನ ಮೊಳೆ ಗ್ರಾಮದ ಬಸವ ನಗರ ತೋಟದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಹಳೆ ವಿದ್ಯಾರ್ಥಿಗಳು, ತಾವು ಓದಿದ ಶಾಲೆಗೆ ಅಗತ್ಯ ಪೀಠೋಪಕರಣ ಹಾಗೂ ತಂತ್ರಜ್ಞಾನ ಉಪಕರಣಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಮಾದರಿಯಾಗಿದ್ದಾರೆ.

ಸುಮಾರು 70 ವರ್ಷಗಳ ನಂತರ ಸಂಘಟಿತರಾಗಿ ‘ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಹಾಗೂ ಗುರುವಂದನಾ’ ಕಾರ್ಯಕ್ರಮವನ್ನು ವಿಜ್ರಂಭಣೆಯಿಂದ ಆಚರಿಸಿದ್ದ ಹಿರಿಯ ವಿದ್ಯಾರ್ಥಿಗಳು, ಆ ಸಮಾರಂಭದಲ್ಲಿ ಉಳಿಕೆಯಾಗಿದ್ದ ಹಣದಲ್ಲಿ ಶಾಲೆಗೆ 30 ಕಬ್ಬಿಣದ ಡೆಸ್ಕ್‌ಗಳು ಹಾಗೂ 2 ಕಂಪ್ಯೂಟರ್‌ಗಳನ್ನು (ಗಣಕಯಂತ್ರ) ಹಸ್ತಾಂತರಿಸಿದ್ದಾರೆ.

ಡಿಜಿಟಲ್ ಶಿಕ್ಷಣಕ್ಕೆ ಉತ್ತೇಜನ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಮತ್ತು ತಾಂತ್ರಿಕ ಜ್ಞಾನ ಅತ್ಯಗತ್ಯವಾಗಿದ್ದು, ಹಳೆ ವಿದ್ಯಾರ್ಥಿಗಳ ಈ ಕೊಡುಗೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬಹುದೊಡ್ಡ ಆಸರೆಯಾಗಲಿದೆ.

ಸಾರ್ವಜನಿಕ ಶ್ಲಾಘನೆ: ತಮ್ಮ ಮಾತೃ ಶಾಲೆಯ ಅಭಿವೃದ್ಧಿಗೆ ಸ್ಪಂದಿಸಿ, ಗ್ರಾಮೀಣ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ನೆರವಾದ ಹಳೆ ವಿದ್ಯಾರ್ಥಿ ಸಂಘದ ಉದಾತ್ತ ಸೇವೆಯನ್ನು ಶಾಲಾ ಸಿಬ್ಬಂದಿ ಹಾಗೂ ಸಾರ್ವಜನಿಕರು ತೀವ್ರವಾಗಿ ಶ್ಲಾಘಿಸಿದ್ದಾರೆ.

(ವರದಿ: ಮಹೇಶ್ ಶರ್ಮಾ)

    About The Author

    error: Content is protected !!