

ಹೊನ್ನಾವರ: ಕರಾವಳಿ ಭಾಗದಲ್ಲಿ 61 ದಿನಗಳ ಮಾನ್ಸೂನ್ ಟ್ರಾಲಿಂಗ್ ನಿಷೇಧದ ಅವಧಿ ಮುಕ್ತಾಯಗೊಂಡಿದ್ದು, ಆಗಸ್ಟ್ 1ರಿಂದ ಆಳ ಸಮುದ್ರ ಮೀನುಗಾರಿಕೆ ಅಧಿಕೃತವಾಗಿ ಆರಂಭಗೊಳ್ಳಲಿದೆ.

ಈ ಹಿನ್ನೆಲೆಯಲ್ಲಿ ಹೊನ್ನಾವರದ ಕಾಸರಕೋಡಿನ ಮೀನುಗಾರರು ತಮ್ಮ ಕುಲಕಸಬಾದ ಸಮುದ್ರ ಮೀನುಗಾರಿಕೆಗೆ ತೆರಳಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಸರ್ಕಾರದ ಆದೇಶದಂತೆ ಸಮುದ್ರ ಮೀನುಗಾರಿಕೆ ಪುನರಾರಂಭಗೊಳ್ಳುತ್ತಿರುವ ಶುಭ ಸಂದರ್ಭದಲ್ಲಿ, ‘ಕರಾವಳಿ ಮೀನುಗಾರ ಕಾರ್ಮಿಕರ ಸಂಘ’ (ರಿ.) ದ ವತಿಯಿಂದ ಸ್ಥಳೀಯ ಪರಿವಾರ ದೇವರಿಗೆ ಹಾಗೂ ಗ್ರಾಮದೇವತೆಯಾದ ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಅಲ್ಲದೆ, ಈ ಬಾರಿಯ ಮೀನುಗಾರಿಕೆ ಋತುವು ಉತ್ತಮ ಫಲ ನೀಡಲಿ ಹಾಗೂ ಸಮುದ್ರಯಾನ ಸುಸೂತ್ರವಾಗಿ ಸಾಗಲಿ ಎಂದು ಪ್ರಾರ್ಥಿಸಿ ಸಮುದ್ರ ದೇವಿ ಮತ್ತು ಮತ್ಸ್ಯರಾಜನಿಗೆ ಭಕ್ತಿಪೂರ್ವಕ ಪೂಜೆ ನೆರವೇರಿಸಲಾಯಿತು.


ಈ ಸಂದರ್ಭದಲ್ಲಿ ಮೀನುಗಾರ ಕಾರ್ಮಿಕರ ಸಂಘದ ಅಧ್ಯಕ್ಷ ರಾಜೇಶ್ ಗೋವಿಂದ ತಾಂಡೇಲ್, ರಮೇಶ್ ಶೇಸು ತಾಂಡೇಲ್, ಸಂಘದ ಕಾರ್ಯದರ್ಶಿ ರಾಜು ತಾಂಡೇಲ್ ಟೊಂಕ, ನರಸಿಂಹ ನಂದಾ, ರಮೇಶ್ ಬಾಬು ಸೇರಿದಂತೆ ಹಲವು ಮೀನುಗಾರರು ಭಾಗವಹಿಸಿದ್ದರು.

About The Author




More Stories
ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ: ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಪ್ರಥಮ, ರಾಜ್ಯ ಮಟ್ಟಕ್ಕೆ ಆಯ್ಕೆ!
ಡಿ. ದೇವರಾಜ ಅರಸು 111ನೇ ಜನ್ಮದಿನಾಚರಣೆ: ಸಾಧಕರ ಸ್ವಗೃಹದಲ್ಲೇ ಸನ್ಮಾನಿಸಿ ಗೌರವಿಸಿದ ಅರಸು ವಿಚಾರ ವೇದಿಕೆ.
ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ: ಹೊನ್ನಾವರದಲ್ಲಿ ಮಾಜಿ ಸಿಎಂ ಜನ್ಮದಿನಾಚರಣೆ.