

ಸಿದ್ದಾಪುರ: ಅಪ್ರತಿಮ ಕರ್ತವ್ಯ ನಿಷ್ಠೆ, ಜನಸ್ನೇಹಿ ನಿಲುವು ಹಾಗೂ ಸೇವಾನಿಷ್ಠೆಯನ್ನು ಗುರುತಿಸಿ, ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಕಾಪ್ ಆಫ್ ಮಂತ್’ (Cop of the Month) ಪ್ರಶಸ್ತಿಗೆ ಬನವಾಸಿ ಪೊಲೀಸ್ ಠಾಣೆಯ ಶಂಕರಮೂರ್ತಿ ನಾಯ್ಕ ಆಯ್ಕೆಯಾಗಿದ್ದಾರೆ.


ಉತ್ತಮ ಗಸ್ತು ಕರ್ತವ್ಯ ವಿಭಾಗದಲ್ಲಿ ಶಿರಸಿ ವಿಭಾಗದಿಂದ ಈ ಗೌರವಕ್ಕೆ ಅವರು ಭಾಜನರಾಗಿದ್ದಾರೆ.

ಉತ್ತಮ ಗಸ್ತು ಸೇವೆಗೆ ಸಂದ ಗೌರವ:
ಸಿದ್ದಾಪುರ ಘಟಕಕ್ಕೆ ಸೇರಿದ ಶಂಕರಮೂರ್ತಿ ನಾಯ್ಕ ಅವರು ಪ್ರಸ್ತುತ ಬನವಾಸಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರೊಂದಿಗೆ ಸದಾ ಜನಸ್ನೇಹಿಯಾಗಿ ವ್ಯವಹರಿಸುತ್ತಾ, ತಮ್ಮ ಗಸ್ತು ಕರ್ತವ್ಯವನ್ನು ಅತ್ಯಂತ ಶಿಸ್ತು ಮತ್ತು ಜವಾಬ್ದಾರಿಯಿಂದ ನಿರ್ವಹಿಸಿಕೊಂಡು ಬಂದಿರುವುದನ್ನು ಗುರುತಿಸಿ ಜಿಲ್ಲಾ ಪೊಲೀಸ್ ಇಲಾಖೆ ಈ ಪ್ರಶಸ್ತಿಯನ್ನು ನೀಡಿದೆ.

ಅಭಿನಂದನೀಯ ಸೇವೆ ಸಲ್ಲಿಸಿ ಪ್ರಶಸ್ತಿಗೆ ಭಾಜನರಾದ ಶಂಕರಮೂರ್ತಿ ಅವರಿಗೆ ಬನವಾಸಿ ಆಡಳಿತ ವಿಭಾಗದ ಆರಕ್ಷಕ ಉಪ ನಿರೀಕ್ಷಕರು (PSI) ಹಾಗೂ ಠಾಣೆಯ ಸಿಬ್ಬಂದಿವರ್ಗದವರು ಆತ್ಮೀಯವಾಗಿ ಅಭಿನಂದನೆಗಳನ್ನು ಸಲ್ಲಿಸಿ, ಶುಭ ಹಾರೈಸಿದ್ದಾರೆ.


About The Author




More Stories
ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ರ್ಯಾಲಿ: ಸೆ.5ಕ್ಕೆ ಶಿರಸಿಯಲ್ಲಿ ಆಕ್ಷೇಪಣಾ ಪತ್ರ ಸಲ್ಲಿಕೆ – ರವೀಂದ್ರ ನಾಯ್ಕ
ಕಸ್ತೂರಿ ರಂಗನ್ 7ನೇ ಅಧಿಸೂಚನೆಗೆ ತೀವ್ರ ವಿರೋಧ: ಜಿಲ್ಲಾದ್ಯಂತ ಲಕ್ಷಕ್ಕೂ ಮಿಕ್ಕಿ ಉಚಿತ ಆಕ್ಷೇಪಣಾ ಪತ್ರ ಸಲ್ಲಿಕೆಗೆ ನಿರ್ಧಾರ – ರವೀಂದ್ರ ನಾಯ್ಕ
11 ವರ್ಷದ ಪೋರ ರಕ್ಷಿತ್ಗೆ ‘ಥಲಸೇಮಿಯಾ ಮೇಜರ್’ ಕಾಯಿಲೆ: ಜೀವ ಉಳಿಸಲು 45 ಲಕ್ಷ ರೂ.ಗಳ ತುರ್ತು ಅಗತ್ಯ – ನೆರವಿಗೆ ದಾನಿಗಳಲ್ಲಿ ಕಳಕಳಿ ಮನವಿ