August 23, 2026

ಆಗಸ್ಟ್ 1ರಿಂದ ಆಳ ಸಮುದ್ರ ಮೀನುಗಾರಿಕೆ ಆರಂಭ: ಕಾಸರಕೋಡಿನಲ್ಲಿ ಸಮುದ್ರ ಪೂಜೆ ನೆರವೇರಿಸಿದ ಮೀನುಗಾರರು

ಹೊನ್ನಾವರ:  ಕರಾವಳಿ ಭಾಗದಲ್ಲಿ 61 ದಿನಗಳ ಮಾನ್ಸೂನ್ ಟ್ರಾಲಿಂಗ್ ನಿಷೇಧದ ಅವಧಿ ಮುಕ್ತಾಯಗೊಂಡಿದ್ದು, ಆಗಸ್ಟ್ 1ರಿಂದ ಆಳ ಸಮುದ್ರ ಮೀನುಗಾರಿಕೆ ಅಧಿಕೃತವಾಗಿ ಆರಂಭಗೊಳ್ಳಲಿದೆ.


ಈ ಹಿನ್ನೆಲೆಯಲ್ಲಿ ಹೊನ್ನಾವರದ ಕಾಸರಕೋಡಿನ ಮೀನುಗಾರರು ತಮ್ಮ ಕುಲಕಸಬಾದ ಸಮುದ್ರ ಮೀನುಗಾರಿಕೆಗೆ ತೆರಳಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಸರ್ಕಾರದ ಆದೇಶದಂತೆ ಸಮುದ್ರ ಮೀನುಗಾರಿಕೆ ಪುನರಾರಂಭಗೊಳ್ಳುತ್ತಿರುವ ಶುಭ ಸಂದರ್ಭದಲ್ಲಿ, ‘ಕರಾವಳಿ ಮೀನುಗಾರ ಕಾರ್ಮಿಕರ ಸಂಘ’ (ರಿ.) ದ ವತಿಯಿಂದ ಸ್ಥಳೀಯ ಪರಿವಾರ ದೇವರಿಗೆ ಹಾಗೂ ಗ್ರಾಮದೇವತೆಯಾದ ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಅಲ್ಲದೆ, ಈ ಬಾರಿಯ ಮೀನುಗಾರಿಕೆ ಋತುವು ಉತ್ತಮ ಫಲ ನೀಡಲಿ ಹಾಗೂ ಸಮುದ್ರಯಾನ ಸುಸೂತ್ರವಾಗಿ ಸಾಗಲಿ ಎಂದು ಪ್ರಾರ್ಥಿಸಿ ಸಮುದ್ರ ದೇವಿ ಮತ್ತು ಮತ್ಸ್ಯರಾಜನಿಗೆ ಭಕ್ತಿಪೂರ್ವಕ ಪೂಜೆ ನೆರವೇರಿಸಲಾಯಿತು.


ಈ ಸಂದರ್ಭದಲ್ಲಿ ಮೀನುಗಾರ ಕಾರ್ಮಿಕರ ಸಂಘದ ಅಧ್ಯಕ್ಷ ರಾಜೇಶ್ ಗೋವಿಂದ ತಾಂಡೇಲ್, ರಮೇಶ್ ಶೇಸು ತಾಂಡೇಲ್, ಸಂಘದ ಕಾರ್ಯದರ್ಶಿ ರಾಜು ತಾಂಡೇಲ್ ಟೊಂಕ, ನರಸಿಂಹ ನಂದಾ, ರಮೇಶ್ ಬಾಬು ಸೇರಿದಂತೆ ಹಲವು ಮೀನುಗಾರರು ಭಾಗವಹಿಸಿದ್ದರು.

About The Author

error: Content is protected !!