

ದತ್ತಾತ್ರೇಯ ಗುರುಗಳ ಬೆಳ್ಳಿ ಪಾದುಕೆಗೆ ಶೋಡಷೋಪಚಾರ ಪೂಜೆ.

ಭಜನೆ, ಸತ್ಸಂಗ ಹಾಗೂ ಗುರು ಮಹಾತ್ಮ್ಯ ಪ್ರವಚನ.

ವಿವಿಧ ವಲಯಗಳಿಂದ ನೂರಾರು ಸಾಧಕರು, ಭಕ್ತಾದಿಗಳ ಭಾಗಿ.

ಬೈಂದೂರು: ಯೋಗಬ್ರಹ್ಮ ಪರಮಪೂಜ್ಯ ಶ್ರೀ ಋಷಿಪ್ರಭಾಕರ ಗುರೂಜಿಯವರ ಆಶೀರ್ವಾದದೊಂದಿಗೆ, ಆಚಾರ್ಯ ಕೇಶವಜೀ ಬೆಳ್ನಿ ಇವರ ನೇತೃತ್ವದಲ್ಲಿ ಸಿದ್ಧ ಸಮಾಧಿ ಯೋಗ ಬೈಂದೂರು ವಲಯ ಸಾಧಕರ ವತಿಯಿಂದ ನಾಗೂರಿನ ಲಲಿತ ಕೃಷ್ಣ ಸಭಾಭವನದಲ್ಲಿ ‘ಗುರುಪೂರ್ಣಿಮೆ’ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗಿತು.


ಧಾರ್ಮಿಕ ಕಾರ್ಯಕ್ರಮ ಹಾಗೂ ಪೂಜಾವಿಧಿ: ಸಭಾಭವನದಲ್ಲಿ ಬೆಳಿಗ್ಗೆಯಿಂದಲೇ ಭಜನೆ, ಸತ್ಸಂಗ ಹಾಗೂ ಗುರುಗಳ ಮಹತ್ವದ ಕುರಿತು ವಿಶೇಷ ಪ್ರವಚನ ಕಾರ್ಯಕ್ರಮಗಳು ನಡೆದವು. ಇದೇ ಸಂದರ್ಭದಲ್ಲಿ ದತ್ತಾತ್ರೇಯ ಗುರುಗಳ ಬೆಳ್ಳಿ ಪಾದುಕೆಗೆ ಪಂಚಾಮೃತ ಅಭಿಷೇಕ ಸೇರಿದಂತೆ ಶೋಡಷೋಪಚಾರ ಮಹಾಮಂಗಳಾರತಿ ಸೇವೆ ನೆರವೇರಿತು. ಪೂಜೆಯ ಬಳಿಕ ಭಕ್ತಾದಿಗಳಿಗೆ ತೀರ್ಥಪ್ರಸಾದ ಹಾಗೂ ಲಘು ಉಪಹಾರ ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಶ್ರೀ ರತ್ನಾಕರ ಉಡುಪ ಅವರು ಸ್ಥಳಾವಕಾಶದ ವ್ಯವಸ್ಥೆ ಮಾಡಿಕೊಟ್ಟಿದ್ದರು. ಸಮಾರಂಭದಲ್ಲಿ ಉಪ್ಪುಂದ ಮಾದಯ್ಯ ಶೆಟ್ರ ಮನೆಯ ಶ್ರೀ ಸೀತಾರಾಮ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಾಧಕರ ಸಮಾಗಮ: ಈ ಗುರುಪೂರ್ಣಿಮೆ ಮಹೋತ್ಸವದಲ್ಲಿ ತ್ರಾಸಿ, ಮರವಂತೆಯಿಂದ ಹಿಡಿದು ಶಿರೂರು, ಮುರುಡೇಶ್ವರದವರೆಗಿನ ವಿವಿಧ ಪ್ರದೇಶಗಳ ಸಿದ್ಧ ಸಮಾಧಿ ಯೋಗ ಸಾಧಕರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡು ಗುರು ಕೃಪೆಗೆ ಪಾತ್ರರಾದರು.
About The Author




More Stories
ಮೂಡಗಲ್ಲು ಶ್ರೀ ಕೇಶವನಾಥೇಶ್ವರ ದೇವಸ್ಥಾನಕ್ಕೆ ತ್ರಿಶೂಲ ಹಾಗೂ ಡಮರುಗ ಸಮರ್ಪಣೆ
ಖ್ಯಾತ ನಿರೂಪಕ ಕಿರಣ್ ಬಿಜೂರು ಇವರಿಗೆ ಯುವ ನಿರೂಪಕ ರತ್ನ ಪ್ರಶಸ್ತಿ
ಉಪನಯನ ಸಂಸ್ಕಾರ–ಬೇಸಿಗೆ ಶಿಬಿರ ಯಶಸ್ವಿ ಸಮಾರೋಪ