ಮಾಜಿ ಸಚಿವ ನಾರಾಯಣಗೌಡ ಹುಟ್ಟುಹಬ್ಬ ರದ್ದು

ಕೆ.ಆರ್.ಪೇಟೆ: ಮಾತೃಸ್ವರೂಪಿ, ತ್ಯಾಗಮಯಿ ಹಾಗೂ ಆದರ್ಶ ಗೃಹಿಣಿ ಶ್ರೀಮತಿ ಚನ್ನಮ್ಮ ದೇವೇಗೌಡ ಅವರ ಅಕಾಲಿಕ ನಿಧನವು ನಾಗರಿಕ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ ಕಂಬನಿ ಕರೆದಿದ್ದಾರೆ.
ಪಟ್ಟಣದ ತಾಲೂಕು ಬಿಜೆಪಿ ಘಟಕದ ವತಿಯಿಂದ ಆಯೋಜಿಸಿದ್ದ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಚನ್ನಮ್ಮ ದೇವೇಗೌಡ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ರಾಜಕೀಯ ಧೀಮಂತರ ಪ್ರೇರಕ ಶಕ್ತಿ
ದೇಶದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ರಾಜಕೀಯ ಹಾಗೂ ಸಾರ್ವಜನಿಕ ಬದುಕಿಗೆ ಪ್ರೇರಕ ಶಕ್ತಿಯಾಗಿದ್ದ ಚನ್ನಮ್ಮ ಅವರು, ಸಾವಿರಾರು ಜನರ ಅರ್ಥಪೂರ್ಣ ಜೀವನಕ್ಕೆ ಮಾರ್ಗದರ್ಶಿಯಾಗಿದ್ದರು. ತಂದೆ-ತಾಯಿಯನ್ನು ಕಳೆದುಕೊಂಡಿದ್ದ ಮಾಜಿ ಸಚಿವ ನಾರಾಯಣಗೌಡ ಅವರ ಸಾಮಾಜಿಕ ಮತ್ತು ರಾಜಕೀಯ ಜೀವನಕ್ಕೆ ತಾಯಿಯ ಸ್ಥಾನದಲ್ಲಿ ನಿಂತು ಆಶೀರ್ವದಿಸಿದ್ದರು. ಅಪಾರ ದೈವಭಕ್ತೆಯಾಗಿದ್ದ ಅವರು, ಇಡೀ ಕುಟುಂಬ ಸೇರಿದಂತೆ ಸಾರ್ವಜನಿಕರ ಕಷ್ಟ-ಸುಖಗಳಿಗೆ ಬೆನ್ನೆಲುಬಾಗಿ ನಿಂತ ಧೀಮಂತ ಹೆಣ್ಣುಮಗಳು ಎಂದು ನಾಗಣ್ಣ ಗುಣಗಾನ ಮಾಡಿದರು.
ಮಾಜಿ ಸಚಿವ ಡಾ. ನಾರಾಯಣಗೌಡರ ಆಪ್ತ ಸಹಾಯಕ ದಯಾನಂದ ಮಾತನಾಡಿ, “ಮಾತೃಶ್ರೀ ಚನ್ನಮ್ಮ ದೇವೇಗೌಡ ಅವರ ನಿಧನದಿಂದ ಉಂಟಾದ ಶೂನ್ಯವನ್ನು ತುಂಬುವುದು ಕಷ್ಟ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಮತ್ತು ಕುಟುಂಬದವರಿಗೆ ಈ ದುಃಖ ಭರಿಸುವ ಶಕ್ತಿ ನೀಡಲಿ” ಎಂದು ಪ್ರಾರ್ಥಿಸಿದರು.

ಮಾಜಿ ಸಚಿವ ನಾರಾಯಣಗೌಡ ಹುಟ್ಟುಹಬ್ಬದ ಕಾರ್ಯಕ್ರಮ ರದ್ದು
ಜುಲೈ 21ರಂದು ಕೆ.ಆರ್.ಪೇಟೆ ಪಟ್ಟಣದಲ್ಲಿ ಮಾಜಿ ಸಚಿವ ನಾರಾಯಣಗೌಡ ಅವರ 64ನೇ ವರ್ಷದ ಹುಟ್ಟುಹಬ್ಬದ ಆಚರಣೆಗಾಗಿ ಅಭಿಮಾನಿಗಳು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ, ಚನ್ನಮ್ಮ ದೇವೇಗೌಡ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಈ ಎಲ್ಲಾ ಹುಟ್ಟುಹಬ್ಬದ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.
“ಅಭಿಮಾನಿಗಳು ತಮ್ಮ ತಮ್ಮ ಊರುಗಳ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಚನ್ನಮ್ಮ ಅವರ ಆತ್ಮಕ್ಕೆ ಚಿರಶಾಂತಿ ಕೋರಬೇಕು. ಹಾಗೆಯೇ ನಾರಾಯಣ ಗೌಡರಿಗೆ ಉತ್ತಮ ಆರೋಗ್ಯ ಮತ್ತು ರಾಜಕೀಯ ಉನ್ನತ ಸ್ಥಾನ ಸಿಗುವಂತೆ ಪ್ರಾರ್ಥಿಸಬೇಕು.”
– ದಯಾನಂದ, ಆಪ್ತ ಸಹಾಯಕರು
ಶ್ರದ್ಧಾಂಜಲಿ ಸಮರ್ಪಣೆ ಕಾರ್ಯಕ್ರಮದಲ್ಲಿ ತಾಲೂಕು ಬಿಜೆಪಿ ಹಿರಿಯ ಉಪಾಧ್ಯಕ್ಷ ಭಾರತೀಪುರ ಪುಟ್ಟಣ್ಣ, ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ರವಿ, ಪುರಸಭೆ ಸದಸ್ಯರಾದ ಪ್ರಮೋದ್, ವಿನೋದ್, ಲೋಕೇಶ್, ನಂದೀಶ್, ಅನಿಲ್, ಸುನಿಲ್, ಮಂಡ್ಯ ಜಿಲ್ಲಾ ನಾಯಕ ಸಂಘದ ಅಧ್ಯಕ್ಷ ಆರ್. ಜಗಧೀಶ್, ಸುನಿಲ್ ಬಲರಾಮೇಗೌಡ, ನಾಗೇಶ್ ಸೇರಿದಂತೆ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ: ಡಾ. ಕೆ.ಆರ್. ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

More Stories
ಕೆ.ಆರ್.ಪೇಟೆಯಲ್ಲಿ ಶಿವ-ಪಾರ್ವತಿಯರ ಪಲ್ಲಕ್ಕಿ ಉತ್ಸವ ಹಾಗೂ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಸಂಭ್ರಮ
ಆಷಾಢದ 2ನೇ ಶುಕ್ರವಾರ: ವಾರಾಹಿ ರೂಪದಲ್ಲಿ ಕಂಗೊಳಿಸಿದ ಶ್ರೀ ಚೌಡೇಶ್ವರಿ ದೇವಿ, ಹರಿದುಬಂದ ಭಕ್ತಸಾಗರ
ಡ್ರಗ್ಸ್ ಮುಕ್ತ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೊಲೀಸರೊಂದಿಗೆ ಕೈಜೋಡಿಸಿ: ಕೆ.ಆರ್.ಪೇಟೆಯಲ್ಲಿ ಡಿವೈಎಸ್ಪಿ ಚೆಲುವರಾಜು ಕರೆ