August 24, 2026

ಬೈಂದೂರಿನಲ್ಲಿ ಚಾತುರ್ಮಾಸ್ಯ ವ್ರತ: ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಆಶೀರ್ವಾದ ಪಡೆದ ಹೊನ್ನಾವರ ಶ್ರೀರಾಮ ಕ್ಷೇತ್ರ ಸೇವಾ ಸಮಿತಿ

ಬೈಂದೂರು / ಹೊನ್ನಾವರ: ಪವಿತ್ರ ಗುರುಪೂರ್ಣಿಮೆಯ ಶುಭ ಸಂದರ್ಭದಲ್ಲಿ, ಹೊನ್ನಾವರ ತಾಲೂಕು ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಬೈಂದೂರಿಗೆ ತೆರಳಿ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರ 7ನೇ ವರ್ಷದ ಚಾತುರ್ಮಾಸ್ಯ ವ್ರತ ಮಹೋತ್ಸವದಲ್ಲಿ ಭಕ್ತಿಯಿಂದ ಪಾಲ್ಗೊಂಡು, ಪೂಜ್ಯಶ್ರೀಗಳ ದಿವ್ಯ ಆಶೀರ್ವಾದ ಪಡೆದುಕೊಂಡರು.


ಈ ಸಂದರ್ಭದಲ್ಲಿ ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷರಾದ ವಾಮನ ಎಸ್. ನಾಯ್ಕ, ಗೌರವಾಧ್ಯಕ್ಷರಾದ ಆರ್. ಎಮ್. ನಾಯ್ಕ್, ಮುಖ್ಯ ಸಂಚಾಲಕರಾದ ಮಂಜುನಾಥ ಎನ್. ನಾಯ್ಕ, ಕಾರ್ಯಾಧ್ಯಕ್ಷರಾದ ಗೋವಿಂದ ಎಸ್. ನಾಯ್ಕ, ಕಾರ್ಯದರ್ಶಿಗಳಾದ ಟಿ. ಟಿ. ನಾಯ್ಕ್ ಮತ್ತು ಜಗದೀಶ್ ಜಿ. ನಾಯ್ಕ್ ಉಪಸ್ಥಿತರಿದ್ದರು.
ಅಲ್ಲದೆ ಉಪಾಧ್ಯಕ್ಷರಾದ ಕೆ. ಆರ್. ನಾಯ್ಕ್, ಸುರೇಶ್ ಎಸ್. ನಾಯ್ಕ್, ರಾಮಪ್ಪ ಜಿ. ನಾಯ್ಕ್, ಪುಷ್ಪ ಜಿ. ನಾಯ್ಕ್, ಸಿ. ಬಿ. ನಾಯ್ಕ, ಮಂಜುನಾಥ್ ನಾಯ್ಕ್ ಗೇರುಸೊಪ್ಪ ಹಾಗೂ ಪ್ರಮುಖರಾದ ಲಂಬೋದರ ನಾಯ್ಕ ಬಳ್ಕೂರ್, ಸೀತಾರಾಮ ನಾಯ್ಕ ಹೊನ್ನಾವರ, ಮೋಹನ ನಾಯ್ಕ ಹೆರಾಳಿ, ಗೋವಿಂದ ದೇವರಗೆದ್ದೆ, ಸುರೇಶ್ ಮಂಜು ನಾಯ್ಕ, ಲಂಬೋದರ ಕಡತೋಕಾ, ಹರಿಯಪ್ಪ ಹುಡುಗೋಡ್, ಆರ್. ಪಿ. ನಾಯ್ಕ್, ಪ್ರಮೋದ್, ರೋಹಿತ್ ಶೇಖರ್ ನಾಯ್ಕ, ಜೆ. ಟಿ. ನಾಯ್ಕ, ಎಂ. ಎಸ್. ನಾಯ್ಕ, ಎಂ. ಎಂ. ನಾಯ್ಕ ಸೇರಿದಂತೆ ಹೊನ್ನಾವರ ತಾಲೂಕಿನ ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ಹಲವಾರು ಸದಸ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದು ಸ್ವಾಮೀಜಿಯವರ ಕೃಪಾಶೀರ್ವಾದಕ್ಕೆ ಪಾತ್ರರಾದರು.

About The Author

error: Content is protected !!