

ಕಿಕ್ಕೇರಿ (ಕೆ.ಆರ್.ಪೇಟೆ): ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ಕೆ.ವೈ. ಹರೀಶ್ ಅವರ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಆಯೋಜಿಸಲಾಗಿತ್ತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಕೆ.ವೈ. ಹರೀಶ್:

“ಸಹಕಾರ ತತ್ವದ ನೈಜ ಉದ್ದೇಶಗಳನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಸಂಘದಲ್ಲಿ ಯಾರೂ ವೈಯಕ್ತಿಕ ಲಾಭಕ್ಕೆ ಪ್ರಯತ್ನಿಸದೆ ಸೇವಾ ಭಾವನೆಯಿಂದ ಕೆಲಸ ಮಾಡಿದರೆ, ಅದರ ನೇರ ಪ್ರತಿಫಲ ರೈತರಿಗೆ ತಲುಪುತ್ತದೆ. ಸಹಕಾರ ಸಂಘಗಳಲ್ಲಿ ರಾಜಕೀಯ ಹಸ್ತಕ್ಷೇಪ ಮಾಡದೆ ಅವುಗಳ ಸಾರ್ವತ್ರಿಕ ಅಭಿವೃದ್ಧಿಗೆ ಆದ್ಯತೆ ನೀಡಬೇಕು,” ಎಂದು ಕರೆ ನೀಡಿದರು. ಅಲ್ಲದೆ ಪ್ರಸಕ್ತ ಸಾಲಿನಲ್ಲಿ ಸಂಘವು 74 ಲಕ್ಷ ರೂಪಾಯಿ ಲಾಭ ಗಳಿಸಿದ್ದು, ಮುಂದಿನ ದಿನಗಳಲ್ಲಿ ಈ ಸಂಘವನ್ನು ರಾಜ್ಯದಲ್ಲೇ ಪ್ರಥಮ ಸ್ಥಾನಕ್ಕೇರಿಸಲು ನಿರ್ದೇಶಕರು ಹಾಗೂ ಷೇರುದಾರರು ಕೈಜೋಡಿಸಬೇಕೆಂದು ಮನವಿ ಮಾಡಿದರು.

ಜಿಲ್ಲೆಯಲ್ಲೇ ಮಾದರಿ ಸಹಕಾರ ಸಂಘ:
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ಪುಟ್ಟರಾಜು ಮಾತನಾಡಿ ನಮ್ಮ ಸಂಘವು ಜಿಲ್ಲೆಯಲ್ಲೇ ಮುಂಚೂಣಿಯಲ್ಲಿದ್ದು, ವಾಣಿಜ್ಯ ಮಳಿಗೆಗಳು, ಗೊಬ್ಬರ ಹಾಗೂ ಕ್ರಿಮಿನಾಶಕ ಮಾರಾಟ, ದಿನಸಿ ಅಂಗಡಿ, ಝೆರಾಕ್ಸ್, ಪಹಣಿ ವಿತರಣೆ ಮತ್ತು ಬ್ಯಾಂಕಿಂಗ್ ಸೇರಿದಂತೆ ಹಲವು ಸೌಲಭ್ಯಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ.


ಸದಸ್ಯರ ಅನುಕೂಲಕ್ಕಾಗಿ ಸುಸಜ್ಜಿತ ಸಮುದಾಯ ಭವನ ನಿರ್ಮಿಸಲಾಗಿದ್ದು, ಇದರಿಂದ ಭಾರಿ ಅನುಕೂಲವಾಗಿದೆ. 74 ಲಕ್ಷ ರೂ.ಗಳ ಆದಾಯದಿಂದ ಸಂಘಕ್ಕೆ ಇನ್ನಷ್ಟು ಆರ್ಥಿಕ ಶಕ್ತಿ ಬಂದಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸಂಘದ ಸದಸ್ಯರು ಮುಂಬರುವ ಅಭಿವೃದ್ಧಿ ಯೋಜನೆಗಳು ಹಾಗೂ ಕುಂದು-ಕೊರತೆಗಳ ಕುರಿತು ಮುಕ್ತವಾಗಿ ಚರ್ಚಿಸಿ ನೋಂದಾಯಿಸಿಕೊಂಡರು.
ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷ ಅಕ್ಷಯ್, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಡಿ.ಎಂ. ಮಹೇಂದ್ರ, ನಿರ್ದೇಶಕರಾದ ಕೆ.ಎಲ್. ಪುಟ್ಟರಾಜು, ಪಾಪೇಗೌಡ, ಕೋಮಲ, ನೀಲಾಮಣಿ, ಕೆ.ಎಂ. ಮುರುಳಿಧರ, ಕೆ.ಜೆ. ಮಂಜುನಾಥ್, ಕೆ.ಎಸ್. ಶಿವರಾಮಯ್ಯ, ಉಪವ್ಯವಸ್ಥಾಪಕಿ ಭಾರತಿ, ನೌಕರರಾದ ಕೆ.ಎನ್. ಬಾಬು, ಶೋಭಾ, ವೆಂಕಟೇಶ್, ಸುಮಿತ್ರ, ಮಮತಾ, ನರಸಿಂಹ, ಮಲ್ಲಿಕಾ, ಮಂಗಳಗೌರಿ ಹಾಗೂ ಸಾವಿರಾರು ಷೇರುದಾರರು ಪಾಲ್ಗೊಂಡಿದ್ದರು.
ವರದಿ: ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ
About The Author




More Stories
ಮಂದಗೆರೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮ: ಪುಟಾಣಿ ಮಕ್ಕಳಿಗೆ ನಟ ಮಧು ಮಂದಗೆರೆಯಿಂದ ಸಿಹಿ ವಿತರಣೆ.
ಸಿದ್ದರಾಮಯ್ಯ ಶೋಷಿತ ವರ್ಗಗಳ ಉಸಿರು, ಸಾಮಾಜಿಕ ನ್ಯಾಯದ ಹರಿಕಾರ: ಕೆ.ಆರ್.ಪೇಟೆಯಲ್ಲಿ ಬಿ. ನಾಗೇಂದ್ರಕುಮಾರ್ ಬಣ್ಣನೆ
ದೇವರು-ಧರ್ಮದ ಮಾರ್ಗದಿಂದ ಮನಸ್ಸಿಗೆ ಶಾಂತಿ, ನೆಮ್ಮದಿ: ಕೆ.ಆರ್.ಪೇಟೆಯಲ್ಲಿ ಬಿ. ನಾಗೇಂದ್ರಕುಮಾರ್ ಪ್ರತಿಪಾದನೆ