

ಶಿರಸಿ (ಉತ್ತರ ಕನ್ನಡ): ನಾಳೆಯ ಭವಿಷ್ಯವಾಗಬೇಕಿದ್ದ 11 ವರ್ಷದ ಪುಟಾಣಿ ಬಾಲಕ ರಕ್ಷಿತ್‌ಗೆ ಮಾರಕ ರೋಗ ಎದುರಾಗಿದ್ದು, ಆತನ ಜೀವ ಉಳಿಸಲು ಕುಟುಂಬಸ್ಥರು ದಾನಿಗಳ ನೆರವಿಗಾಗಿ ಕೈಚಾಚಿದ್ದಾರೆ. ಸಣ್ಣ ಸಹಾಯವೂ ಈ ಪ್ರತಿಭಾವಂತ ಬಾಲಕನ ಜೀವನಕ್ಕೆ ಹೊಸ ಬೆಳಕಾಗಬಲ್ಲದು.

ಶಿರಸಿಯ ಗಾಂಧಿನಗರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ರಕ್ಷಿತ್ (ಯಲ್ಲಾಪುರದ ಮೂಲ ನಿವಾಸಿ ಕೃಷ್ಣ ಟಿ. ಮರಾಠಿ ಅವರ ಮಗ), ಹುಟ್ಟಿನಿಂದಲೇ ‘ಥಲಸೇಮಿಯಾ ಮೇಜರ್’ (Thalassemia Major) ಎಂಬ ತೀವ್ರ ರಕ್ತ ಸಂಬಂಧಿ ಅನುವಂಶೀಯ ಕಾಯಿಲೆಯಿಂದ ಬಳಲುತ್ತಿದ್ದಾನೆ.

ಪ್ರತಿ ತಿಂಗಳು ರಕ್ತ ಬದಲಾವಣೆ – ಈಗಾಗಲೇ 15 ಲಕ್ಷ ವೆಚ್ಚ: ರಕ್ಷಿತ್‌ಗೆ ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಪ್ರತಿ ತಿಂಗಳು ರಕ್ತ ಬದಲಿಸುವ ಚಿಕಿತ್ಸೆ ನೀಡಲಾಗುತ್ತಿದೆ. ಮಗನ ಜೀವ ಉಳಿಸಲು ತಂದೆ-ತಾಯಿ ಈಗಾಗಲೇ 15 ಲಕ್ಷ ರೂಪಾಯಿಗೂ ಅಧಿಕ ಹಣ ಖರ್ಚು ಮಾಡಿದ್ದಾರೆ. ಪ್ರಸ್ತುತ ಬಾಲಕನಿಗೆ ಅಸ್ತಿಮಜ್ಜೆ ಕಸಿ (Bone Marrow Transplant) ಒಂದೇ ಶಾಶ್ವತ ಪರಿಹಾರವಾಗಿದ್ದು, ಬೆಂಗಳೂರಿನ ನಾರಾಯಣ ಹೆಲ್ತ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಚಿಕಿತ್ಸೆ ಪ್ರಾರಂಭಿಸಲಾಗಿದೆ.

45 ಲಕ್ಷ ರೂಪಾಯಿ ಅಗತ್ಯ: ಈ ತುರ್ತು ಶಸ್ತ್ರಚಿಕಿತ್ಸೆಗೆ ಬಾರಿಯ 45 ಲಕ್ಷ ರೂಪಾಯಿ ವೆಚ್ಚ ತಗುಲಲಿದೆ. ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ ಪೋಷಕರಿಗೆ ಇಷ್ಟೊಂದು ಬೃಹತ್ ಮೊತ್ತವನ್ನು ಹೊಂದಿಸುವುದು ಅಸಾಧ್ಯವಾಗಿದೆ.


“ಹನಿ ಹನಿ ಕೂಡಿದರೆ ಹಳ್ಳ” ಎಂಬಂತೆ, ಉದಾರ ಮನಸ್ಸಿನ ದಾನಿಗಳು, ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳು ತಮ್ಮ ಕೈಲಾದ ಆರ್ಥಿಕ ನೆರವು ನೀಡಿ ರಕ್ಷಿತ್‌ಗೆ ಮರುಜನ್ಮ ನೀಡಬೇಕಾಗಿ ಕಳಕಳಿಯಿಂದ ವಿನಂತಿಸಿಕೊಳ್ಳಲಾಗಿದೆ.
ಆರ್ಥಿಕ ನೆರವು ನೀಡಲು ಬ್ಯಾಂಕ್ ವಿವರಗಳು:
- ಖಾತೆದಾರರ ಹೆಸರು: ಕೃಷ್ಣ ಮರಾಠಿ (Krishna Marathi)
- ಖಾತೆ ಸಂಖ್ಯೆ: 64192088977
- IFSC ಕೋಡ್: SBIN0040544
- ಬ್ಯಾಂಕ್: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಅಶ್ವಿನಿ ಸರ್ಕಲ್, ಶಿರಸಿ.
- Google Pay / PhonePe ಸಂಖ್ಯೆ: 98866 04890
(ದಯವಿಟ್ಟು ಈ ಸುದ್ದಿಯನ್ನು ಜಾಲತಾಣಗಳಲ್ಲಿ ಗರಿಷ್ಠ ಮಟ್ಟದಲ್ಲಿ ಹಂಚಿಕೊಂಡು ಬಾಲಕನ ಜೀವ ಉಳಿಸಲು ಸಹಕರಿಸಿ)
About The Author




More Stories
ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ರ್ಯಾಲಿ: ಸೆ.5ಕ್ಕೆ ಶಿರಸಿಯಲ್ಲಿ ಆಕ್ಷೇಪಣಾ ಪತ್ರ ಸಲ್ಲಿಕೆ – ರವೀಂದ್ರ ನಾಯ್ಕ
‘ಕಾಪ್ ಆಫ್ ಮಂತ್’ ಪ್ರಶಸ್ತಿಗೆ ಶಂಕರಮೂರ್ತಿ ನಾಯ್ಕ ಆಯ್ಕೆ.
ಕಸ್ತೂರಿ ರಂಗನ್ 7ನೇ ಅಧಿಸೂಚನೆಗೆ ತೀವ್ರ ವಿರೋಧ: ಜಿಲ್ಲಾದ್ಯಂತ ಲಕ್ಷಕ್ಕೂ ಮಿಕ್ಕಿ ಉಚಿತ ಆಕ್ಷೇಪಣಾ ಪತ್ರ ಸಲ್ಲಿಕೆಗೆ ನಿರ್ಧಾರ – ರವೀಂದ್ರ ನಾಯ್ಕ